Toll Rate Hike : ಕರ್ನಾಟಕ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್.

Toll Rate Hike : ಕರ್ನಾಟಕದಲ್ಲಿ ವಾಹನ ಸವಾರರಿಗೆ ಮತ್ತೊಂದು ಆರ್ಥಿಕ ಹೊಡೆತ ಬೀಳಲಿದೆ. ಏಪ್ರಿಲ್ 1, 2026 ರಿಂದ ರಾಜ್ಯದ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಟೋಲ್ ದರಗಳು ಶೇಕಡಾ 3 ರಿಂದ 5 ರಷ್ಟು ಹೆಚ್ಚಾಗಲಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರತಿ ವರ್ಷ ನಡೆಸುವ ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ (WPI) ಆಧಾರಿತ ಪರಿಷ್ಕರಣೆಯಂತೆ ಈ ಏರಿಕೆ ಜಾರಿಯಾಗಲಿದೆ.
ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್
ಹೊಸ ಟೋಲ್ ದರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ಸುಮಾರು 10 ಟೋಲ್ ಪ್ಲಾಜಾಗಳಲ್ಲಿ ಮಾತ್ರ ಸೆಪ್ಟೆಂಬರ್ 1ರಿಂದ ಏರಿಕೆ ಅನ್ವಯವಾಗಲಿದೆ.
ಯಾವ ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ?
ಏಪ್ರಿಲ್ 1ರಿಂದ ದರ ಏರಿಕೆ ಅನ್ವಯವಾಗಲಿರುವ ಪ್ರಮುಖ ಟೋಲ್ ಪ್ಲಾಜಾಗಳು:
- ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (Bengaluru–Mysuru Expressway)
- ಬಾಗೇಪಲ್ಲಿ (ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ)
- ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ)
- ನಾಂಗ್ಲಿ (ಬೆಂಗಳೂರು–ತಿರುಪತಿ ಮಾರ್ಗ)
- ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಟ್ರಾಟಜಿಕ್ ರೋಡ್ ಡೆವಲಪ್ಮೆಂಟ್ ಮಾರ್ಗ)
READ THIS : ಯಶು ಮುದ್ದು.. ಕಿಸ್ ಮಿ, ಹಗ್ ಮಿ! ರೌಡಿಶೀಟರ್ ಯಶಸ್ವಿನಿ ಹಿಂದೆ ಬಿದ್ದ ಪೊಲೀಸಪ್ಪ

ಟೋಲ್ ದರ ಏರಿಕೆ ಹೇಗೆ?
ಟೋಲ್ ದರಗಳನ್ನು WPI ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ. ₹2.50 ಅಥವಾ ಅದಕ್ಕಿಂತ ಹೆಚ್ಚು ಏರಿಕೆ ಕಂಡುಬಂದರೆ ಅದನ್ನು ₹5ಕ್ಕೆ ರೌಂಡ್ ಆಫ್ ಮಾಡಲಾಗುತ್ತದೆ. ಈ ನಿಯಮ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಯ ಪ್ರಕಾರ ಜಾರಿಯಲ್ಲಿದೆ.
ವಾಹನ ಸವಾರರಿಗೆ ಹೆಚ್ಚುವರಿ ಹೊರೆ
ಈಗಾಗಲೇ ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ದರ ಹೆಚ್ಚಳಗೊಂಡಿದ್ದು, ಹೊಸ ಏರಿಕೆಯಿಂದ ಒಂದೇ ದಿಕ್ಕಿನ ಪ್ರಯಾಣಕ್ಕೆ ₹180ಕ್ಕೂ ಹೆಚ್ಚು ಟೋಲ್ ತೆರಬೇಕಾಗುವ ಸಾಧ್ಯತೆ ಇದೆ.
ಬೆಂಗಳೂರಿನಿಂದ ಕೇರಳಕ್ಕೆ ಪ್ರಯಾಣಿಸುವವರಿಗೂ ಟೋಲ್ ವೆಚ್ಚ ಈಗಾಗಲೇ ₹2000 ರಿಂದ ₹3000ರ ನಡುವೆ ಇದ್ದು, ಈ ಹೊಸ ಏರಿಕೆಯಿಂದ ಮತ್ತಷ್ಟು ದುಬಾರಿಯಾಗಲಿದೆ ಎಂದು ಪ್ರವಾಸಿ ವಾಹನ ಮಾಲೀಕರು ಹೇಳುತ್ತಿದ್ದಾರೆ.
MUST WATCH : ಅಪ್ಪನ ಹಾದಿಯಲ್ಲಿ RAJENDRA RAJANNA – ತಂದೆಯ ಹಾಗೆ ಮಂತ್ರಿ ಸ್ಥಾನಕ್ಕೆ ಏರುತ್ತಾರಾ..?





