Bengaluru : ಪೊಲೀಸ್ ಇನ್ಸ್ಪೆಕ್ಟರ್ನಿಂದ ಲೇಡಿ ರೌಡಿಶೀಟರ್ಗೇ ಲೈಂಗಿಕ ಕಿರುಕುಳ: ಚಿನ್ನ, ಮುದ್ದು, ಬಂಗಾರಿ ಎಂದವನಿಂದಲೇ ಕೊಲೆ ಬೆದರಿಕೆ!

Bengaluru : ಸಮಾಜಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರೇ ದಾರಿ ತಪ್ಪಿದರೆ ಹೇಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಖಾಕಿ ತೊಟ್ಟ ಪೊಲೀಸ್ ಇನ್ಸ್ಪೆಕ್ಟರ್ ಓರ್ವ, ಲೇಡಿ ರೌಡಿಶೀಟರ್ ಹಿಂದೆ ಬಿದ್ದು ‘ಕಿಸ್ ಕೊಡು, ಹಗ್ ಮಾಡ್ಕೋ’ ಎಂದು ಒತ್ತಾಯಿಸಿದ ಆರೋಪ ಕೇಳಿಬಂದಿದೆ.
ಇನ್ಸ್ಪೆಕ್ಟರ್ನಿಂದ ಲೇಡಿ ರೌಡಿಶೀಟರ್ಗೇ ಲೈಂಗಿಕ ಕಿರುಕುಳ
ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಾಪಣ್ಣ ಅವರು ಲೇಡಿ ರೌಡಿಶೀಟರ್ ಯಶಸ್ವಿನಿಗೆ ಮೆಸೇಜ್ ಹಾಗೂ ಕರೆ ಮಾಡಿ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಯಶಸ್ವಿನಿ ನೇರವಾಗಿ ನಗರ ಪೊಲೀಸ್ ಕಮಿಷನರ್ಗೆ ದೂರು ಸಲ್ಲಿಸಿದ್ದಾಳೆ.
ಯಶು ಮುದ್ದು.. ಕಿಸ್ ಮಿ, ಹಗ್ ಮಿ!
ಲೇಡಿ ರೌಡಿಶೀಟರ್ ಯಶಸ್ವಿನಿಗೆ ಇನ್ಸ್ಪೆಕ್ಟರ್ ಪಾಪಣ್ಣ ಕಳುಹಿಸಿದ್ದಾರೆ ಎನ್ನಲಾದ ವಾಟ್ಸಾಪ್ ಮೆಸೇಜ್ಗಳು ಹಾಗೂ ಆಡಿಯೋ ಸಂಭಾಷಣೆಗಳು ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತಿವೆ. ಆಕೆಯ ಚಾಟ್ನಲ್ಲಿರುವ ಮೆಸೇಜ್ಗಳು ಹೀಗಿವೆ.
‘ಯಶು ಮುದ್ದು, ಯಶು ಮುದ್ದು ಏನಾಗಿದೆ ಚಿನ್ನು ನಿನಗೆ?’
‘ನಾನು ಮನೆಗೆ ಹೋಗಿಲ್ಲ, ನಿಮ್ ಮನೆಗೆ ಬರ್ತೀನಿ. ನಿನಗೆ ಕಿಸ್ ಮಾಡ್ಬೇಕು ಅನಿಸ್ತಿದೆ, ಹಗ್ ಮಾಡ್ಕೊಳ್ಬೇಕು ಅನಿಸ್ತಿದೆ.’
‘ಯಾಕ್ ನನ್ನ ಜೊತೆ ಮಾತಾಡಲ್ಲ ನೀನು? ಯಾಕ್ ನನ್ ಮೆಸೇಜಸ್ ಗೆ ರಿಪ್ಲೈ ಮಾಡಲ್ಲ ನೀನು?’
‘ಏ ಹುಡ್ಗಿ ಆರಾಮಿದ್ಯ, ಒಂದ್ ಸ್ಮೈಲ್ ಕೊಡು’.
‘ನಾನು ನಿನ್ನ ಯಶು ಬೇಬಿ ಅಂತೀನಿ, ನೀನು ನನ್ನ ಇನ್ಸ್’ಪೆಕ್ಟರ್ ಪಾಪಣ್ಣ ಅನ್ನಬಾರದು.. ಪಾಪು ಅನ್ನಬೇಕು. ಇನ್ಸ್’ಪೆಕ್ಟರ್ ಅಂದ್ರೆ ಅಲ್ಲೆಬಂದು ಹೊಡಿತೀನಿ ನೋಡು.’
‘ಯಶು.. ಯಶು ಮುದ್ದು ಬಂಗಾರು ಒಂದ್ ಮುತ್ತು ಬೇಕು.. ಹಗ್ ಮಿ, ಕಿಸ್ ಮಿ!’

READ THIS : Kalaburagi|ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವು..!!
ನನ್ನನ್ನು ಯಾರೂ ಏನು ಮಾಡಲಿಕ್ಕಾಗಲ್ಲ
ಇದಲ್ಲದೆ, ತನ್ನ ವಿರುದ್ಧ ಯಾರೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸಪ್ಪ ದರ್ಪ ತೋರಿದ್ದಾನೆಂಬ ಆರೋಪವೂ ಕೇಳಿಬಂದಿದೆ. ನನ್ನ ಪತ್ನಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿ. ಹೀಗಾಗಿ ನನ್ನನ್ನು ಯಾರೂ ಏನು ಮಾಡಲಿಕ್ಕಾಗಲ್ಲ ಎಂದು ಅವಾಜ್ ಹಾಕಿರುವ ಗಂಭೀರ ಆರೋಪವೂ ಇನ್ಸ್ಪೆಕ್ಟರ್ ಮೇಲಿದೆ.
2017ರಲ್ಲೇ ಶುರುವಾಗಿತ್ತು ಕಾಟ?
2017ರಲ್ಲಿ ಪಾಪಣ್ಣ ಅವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು. ಆ ವೇಳೆ ಯಶಸ್ವಿನಿ ಅದೇ ಬಸವನಗುಡಿ ಠಾಣೆಯ ರೌಡಿಶೀಟರ್ ಆಗಿದ್ದಳು.
ಆಗಲೇ ಆಕೆಯ ನಂಬರ್ ಪಡೆದುಕೊಂಡಿದ್ದ ಪಾಪಣ್ಣ, ಮೆಸೇಜ್, ಕಾಲ್ ಮಾಡಲು ಶುರು ಮಾಡಿದ್ದರು. ಕಿರಿಕಿರಿ ತಾಳಲಾರದೆ ಆಗಲೇ ಯಶಸ್ವಿನಿ ಆತನ ನಂಬರ್ ಬ್ಲಾಕ್ ಮಾಡಿದ್ದಳು.
ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿ ಕಾಟ
ಪ್ರಸ್ತುತ ಕೋಣನಕುಂಟೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಯಶಸ್ವಿನಿಗೆ, ಇದೇ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಬಂದ ಪಾಪಣ್ಣ 2026ರ ಜನವರಿಯಿಂದ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದು, ಆತನ ನಂಬರ್ ಬ್ಲಾಕ್ ಮಾಡಿದರೂ ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿ ಕಾಟ ಕೊಡುತ್ತಿದ್ದಾರೆ ಎಂದು ಯಶಸ್ವಿನಿ ದೂರಿದ್ದಾಳೆ.

ವಾಟ್ಸಪ್ ಚಾಟ್, ಆಡಿಯೋ ಸಾಕ್ಷ್ಯ ಸಲ್ಲಿಕೆ
ಅಂದಹಾಗೆ ಯಶಸ್ವಿನಿಯ ಪತಿ ಮಹೇಶ್ ಕೂಡ ರೌಡಿಶೀಟರ್ ಆಗಿದ್ದು, ಕಿರುಕುಳ ಮಿತಿಮೀರಿದ ಹಿನ್ನೆಲೆಯಲ್ಲಿ ಆಡಿಯೋ ದಾಖಲೆಗಳು ಮತ್ತು ವಾಟ್ಸಾಪ್ ಚಾಟ್ ಸ್ಕ್ರೀನ್ಶಾಟ್ಗಳೊಂದಿಗೆ ಕಮಿಷನರ್ಗೆ ದೂರು ನೀಡಲಾಗಿದೆ. ಈ ಘಟನೆ ಇದೀಗ ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
MUST WATCH : ಗಂಡ ಬೇಡ ಅಂತಾ ಪತ್ನಿ ರಂಪಾಟ – ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನ




