ಅಬ್ಬಬ್ಬಾ! Dhurandhar 2 ಭರ್ಜರಿ ಗಳಿಕೆ – 3ನೇ ದಿನದ ಕಲೆಕ್ಷನ್ ಎಷ್ಟು ಕೋಟಿ?

ಆದಿತ್ಯ ಧಾರ್ ನಿರ್ದೇಶನದ, ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ಚಿತ್ರವು ವಿಶ್ವದಾದ್ಯಂತ 500 ಕೋಟಿ ರೂಪಾಯಿ ಕ್ಲಬ್ಗೆ ಸೇರುವ ಮೂಲಕ ದಾಖಲೆ ಬರೆದಿದೆ.
ಭಾರತದಲ್ಲಿ Dhurandhar 2 ಎಷ್ಟು ಕಲೆಕ್ಷನ್?
ಈ ಚಿತ್ರವು ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತದಲ್ಲಿ 226.27 ಕೋಟಿ ರೂ. ಗಳಿಕೆ ಮಾಡಿದ್ದು, ಮೂರನೇ ದಿನವೇ 113 ಕೋಟಿ ರೂ. ಸಂಗ್ರಹಿಸಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ವರದಿ ನೀಡಿದೆ. ಇದರಿಂದ ದೇಶೀಯ ಬಾಕ್ಸ್ ಆಫೀಸ್ನಲ್ಲಿ ಒಟ್ಟು 339.27 ಕೋಟಿ ರೂ. ಕಲೆಕ್ಷನ್ ಆಗಿದೆ.
READ THIS : TT ಹಾಗೂ ಕಂಟೈನರ್ ನಡುವೆ Accident – ಮೂವರು ಮಹಿಳೆಯರ ಸಾವು..!

ಪುಷ್ಪ2 ದಾಖಲೆ ಉಡೀಸ್?
‘Dhurandhar 2’ ಸಿನಿಮಾ ಈಗಾಗಲೇ ‘ಪುಷ್ಪ 2’ ಚಿತ್ರದ ಆರಂಭಿಕ ವಾರಾಂತ್ಯದ ದಾಖಲೆಯನ್ನು ಮುರಿಯುವ ಹಾದಿಯಲ್ಲಿದೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಭಾರತದಲ್ಲಿ ಮೊದಲ ವಾರಾಂತ್ಯದಲ್ಲಿ 354 ಕೋಟಿ ರೂ. ಗಳಿಸಿತ್ತು. ಈ ದಾಖಲೆಯನ್ನು ಮೀರುವ ಗುರಿಯನ್ನು ‘ಧುರಂಧರ್ 2’ ಹೊಂದಿದೆ.
ವಿಶ್ವಾದ್ಯಂತ 501.04 ಕೋಟಿರೂ. ಗಳಿಕೆ
ಸಿನಿಮಾ ವಿಶ್ವಾದ್ಯಂತ 501.04 ಕೋಟಿ ರೂ. ಗಳಿಕೆ ಮಾಡಿದೆ. ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್ನಲ್ಲಿ (ಯುಎಸ್ಎ ಮತ್ತು ಕೆನಡಾ) ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. ಇಲ್ಲಿ ಬಿಡುಗಡೆಯಾದ ಮೂರನೇ ದಿನದಂದು ಚಿತ್ರದ ಒಂದು ದಿನದ ಗಳಿಕೆ $4.0 ಮಿಲಿಯನ್ (35 ಕೋಟಿ ರೂ.) ನಿಂದ $4.5 ಮಿಲಿಯನ್ (40 ಕೋಟಿ ರೂ.) ತಲುಪಿದೆ.

MUST WATCH : ಜಾನುವಾರು ಸಾಗಾಟ ವಿಚಾರಕ್ಕೆ ಇದೆಂಥಾ ದಬ್ಬಾಳಿಕೆ- ಬಜರಂಗ ದಳದವರ ಮೇಲೆ ಹಲ್ಲೆ




