ಚಿಕ್ಕಬಳ್ಳಾಪುರ ಸಮೀಪ ಲಾರಿ ಮತ್ತು TT ನಡುವೆ Accident ಸಂಭವಿಸಿ ಕಾಶಿಯಾತ್ರೆಗೆ ಹೊರಟಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರೆ..

ಕಾಶಿಯಾತ್ರೆಗೆ ಹೊರಟಿದ್ದ ಮಹಿಳೆಯರ ತಂಡದ TT ವಾಹನಕ್ಕೆ Accident ಅದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಘಟನೆ Devanahalli ಪಟ್ಟಣ ಹೊರವಲಯದ ರಾಣಿ ಕ್ರಾಸ್ ಸಮೀಪ ಸಂಭವಿಸಿದೆ.

ಹೇಗೆ ಸಂಭವಿಸಿತು ಅಪಘಾತ?
ಮಾಹಿತಿಯ ಪ್ರಕಾರ, Tiptur ಮೂಲದ 12 ಮಂದಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಕಾಶಿಯಾತ್ರೆಗೆ ತೆರಳಲು ಯೋಜಿಸಿದ್ದರು. ಅವರು ಟಿಟಿ ವಾಹನದ ಮೂಲಕ Kempegowda International Airport ತಲುಪಿ ಅಲ್ಲಿಂದ ವಿಮಾನದಲ್ಲಿ ಕಾಶಿಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದರು.
ಆದರೆ, ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ರಾಣಿ ಕ್ರಾಸ್ ಬಳಿ ಸರ್ವಿಸ್ ರಸ್ತೆಗೆ ತಿರುಗುವಾಗ ಟಿಟಿ ಚಾಲಕ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಓಪನ್ ಟ್ರಕ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
MUST READ : ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಜೋರು – ಅಭ್ಯರ್ಥಿಗಳನ್ನ ಘೋಷಣೆ ಮಾಡಿದ Congress

ಡಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವು
ಟಿಟಿ ವಾಹನ ಲಾರಿಯ ಹಿಂಭಾಗದ ಚೂಪಾದ ಭಾಗಕ್ಕೆ ಡಿಕ್ಕಿಯಾದ ಪರಿಣಾಮ ವಾಹನದ ಎಡಭಾಗ ಸಂಪೂರ್ಣ ಹಾನಿಗೊಳಗಾಯಿತು. ಇದರಿಂದ, ಎಡಭಾಗದ ಸೀಟುಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಯಶೋಧಮ್ಮ (60) ,ಜಯಮ್ಮ (65) ,ಗಂಗಾ (38) ಎಂದು ಗುರುತಿಸಲಾಗಿದೆ.

ಘಟನೆಯ ವೇಳೆ ಟಿಟಿಯಲ್ಲಿ ಚಾಲಕ ಸೇರಿದಂತೆ 12 ಮಂದಿ ಮಹಿಳೆಯರು ಪ್ರಯಾಣಿಸುತ್ತಿದ್ದರು. ಮೃತ ಗಂಗಾಳನ್ನು ಬೀಳ್ಕೊಡಲು ಅವರ ಗಂಡ ಕೂಡ ವಾಹನದಲ್ಲಿ ಇದ್ದರು.
ಇದರಿಂದ, ನಾಲ್ವರು ಗಾಯಗೊಂಡಿದ್ದು, ಅವರಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ Devanahalli Traffic Police Station ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
ಇದೀಗ, ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
MUST WATCH : CYLINDER ಕೊರತೆಯಿಂದ FOOD COURT ಬಂದ್- HOTEL ಮಾಲೀಕರು ಗೋಳು ಕೇಳೊರು ಯಾರು? | TUMAKURU NEWS |




