ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ – Congress ನಿಂದ ಅಧಿಕೃತ ಟಿಕೆಟ್ ಘೋಷಣೆ.

ರಾಜ್ಯದಲ್ಲಿ ಬೈಎಲೆಕ್ಷನ್ ಕಾವು ಜೋರಾಗಿದ್ದು, ಎರಡು ಕ್ಷೇತ್ರಗಳಲ್ಲಿ ಏಫ್ರಿಲ್ 9ರಂದು ಚುನಾವಣೆ ನಡೆಯಲಿದೆ. ಹೌದು ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಟಿಕೆಟ್ ಹಂಚಿಕೆ ವಿಚಾರದಲ್ಲಿ Congress ಪಾಳಯದಲ್ಲಿ ತೀವ್ರಗೊಂಡಿತ್ತು.
ಈ ನಡುವೆ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ದಾವಣಗೆರೆ ಕ್ಷೇತ್ರದಿಂದ ಸಮರ್ಥ ನಾಮಪತ್ರ ಸಲ್ಲಿಸಿದ್ರು. ಅಲ್ದೇ ಟಿಕೆಟ್ ಹಂಚಿಕೆ ಗೊಂದಲವನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಸುರ್ಜೇವಾಲ ಕೂಡ ದೌಡಾಯಿಸಿ, ಸಿಎಂ ಡಿಸಿಎಂ ಅವರೋಂದಿಗೆ ಚರ್ಚಿಸಿ ಇಂದು ಟಿಕೆಟ್ ಘೋಷಣೆ ಮಾಡಲಾಗಿದೆ.

ಬೈಎಲೆಕ್ಷನ್ ಕಾವು ಜೋರು
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ಮಲ್ಲಿಕಾರ್ಜುನ್ಗೆ ಹಾಗು ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ನ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲಾಗಿದೆ.
MUST WATCH : ಕಾಶಿ ಯಾತ್ರೆಗೆ ಹೊರಟವರು ಶಿವನ ಪಾದಕ್ಕೆ – ಭೀಕರ ಅಫಘಾತದಲ್ಲಿ ಮಹಿಳೆಯರು ಸಾ*
ಸಮರ್ಥಗೆ ಟಿಕೆಟ್ ನೀಡಿ ಘೋಷಣೆ
ದಾವಣಗೆರೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದ ಮುಸ್ಲಿಂ ನಾಯಕರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು. ಸಿಎಂ ಸಿದ್ದರಾಮಯ್ಯ ಮುಸ್ಲಿಂ ಅಭ್ಯರ್ಥಿ ಪರವಾಗಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಮರ್ಥ್ ಅವರ ಪರವಾಗಿದ್ದರು ಎಂಬ ಚರ್ಚೆಗಳು ತಾರಕಕ್ಕೇರಿದ್ದವು. ಅಂತಿಮವಾಗಿ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ಸಭೆಯಲ್ಲಿ ಸಮರ್ಥಗೆ ಟಿಕೆಟ್ ನೀಡಿ ಘೋಷಣೆ ಮಾಡಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಮೇಟಿ ಪುತ್ರನಿಗೆ ಟಿಕೆಟ್ ಘೋಷಣೆ
ಇನ್ನೊಂದೆಡೆ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಮೇಟಿ ಅವರ ನಿಧನದ ಬಳಿಕ ಕುಟುಂಬದ ಸದಸ್ಯರ ನಡುವೆಯೇ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿತ್ತು.
ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಕ್ಷೇಪ ಮಾಡಿ, ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

READ THIS : Gold ಪ್ರಿಯರಿಗೆ ಗುಡ್ನ್ಯೂಸ್ – ಚಿನ್ನ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ
ಒಮ್ಮತದ ಮೇರೆಗೆ ಟಿಕೆಟ್ ಘೋಷಣೆ
ಒಟ್ನಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಮೂಡಿದ್ದ ಗೊಂದಲಗಳಿಗೆ ಸುರ್ಜೇವಾಲ ಮದ್ದು ಅರೆದಿದ್ದು, ಒಮ್ಮತದ ಮೇರೆಗೆ ಟಿಕೆಟ್ ಘೋಷಣೆ ಮಾಡಿದ್ದು, ಒಗ್ಗಟ್ಟಿನಲ್ಲಿ ಚುನಾವಣೆ ಹೆದುರಿಸುವಂತೆ ನಾಯಕರಿಗೆ ಸ್ಪಷ್ಟ ಸಂದೇಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಯ ಕಾವು ಯಾವ ಸ್ವರೂಪಕ್ಕೆ ತಿರುಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.




