ಶ್ವಾನಗಳ ಬಗ್ಗೆ Dog Sathish ಕೆಟ್ಟ ಮಾತು – ದಾಖಲಾಯ್ತು ದೂರು.

ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ದೂರು ದಾಖಲಾಗಿದೆ. ನಾಯಿಗಳ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅನಿಮಲ್ ವೆಲ್ಫೇರ್ ಸಪೋರ್ಟ್ ಸಂಘಟನೆಯ ಲಕ್ಷ್ಮೀ ಅವರು ದೂರು ನೀಡಿದ್ದಾರೆ.
ಶ್ವಾನಗಳ ಬಗ್ಗೆ Dog Sathish ಕೆಟ್ಟ ಮಾತು
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಕ್ಕನ್ಲೇ ಸುಭಾಷ್ ಕೇಳಿದ ಪ್ರಶ್ನೆಗೆ ಡಾಗ್ ಸತೀಶ್ ಅಸಭ್ಯವಾಗಿ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ದೂರಿನಲ್ಲೇ ಏನಿದೆ?
ವೈರಲ್ ಆದ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಟಾಟ್ ಸುಭಾಷ್ (ಸುಭಾಷ್ ಪ್ರಜಾಪತ್) ಅವರ ಜೊತೆ ಮಾತನಾಡುತ್ತಿದ್ದ ವೇಳೆ ಡಾಗ್ ಸತೀಶ್ ನಾಯಿಗಳ ಬಗ್ಗೆ ತೀರಾ ಅಸಭ್ಯವಾಗಿ ಮಾತನಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

READ THIS : 16 ವರ್ಷದೊಳಗಿನ ಮಕ್ಕಳಿಗೆ Social Media ಬ್ಯಾನ್!
ತೀರಾ ಅಸಹ್ಯ ಉತ್ತರ
ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅವರು ತಮ್ಮನ್ನು ತಾವು ಡಾಗ್ ಬ್ರೀಡರ್ ಎಂದು ಕರೆದುಕೊಂಡಿದ್ದಾರೆ. ನಾಯಿಯ ಮಿಲನದ ಕುರಿತು ಸುಭಾಷ್, ಡಾಗ್ ಸತೀಶ್ ಅವರಲ್ಲಿ ಅಸಹ್ಯಕರವಾಗಿ ಪ್ರಶ್ನೆಯನ್ನು ಕೇಳಿದ್ದರೆ, ಡಾಗ್ ಸತೀಶ್ ಇನ್ನೂ ತೀರಾ ಅಸಹ್ಯವಾಗಿ ಉತ್ತರವನ್ನು ನೀಡಿದ್ದಾರೆ. Dog Sathish ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ.
ಅಪ್ರಾಪ್ತರ ಮೇಲೆ ಗಂಭೀರ ಪರಿಣಾಮ
ಇಂತಹ ಮಾತುಗಳಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿರುವ ಲಕ್ಷ್ಮಿ, ಯುವಜನತೆ ಮತ್ತು ಅಪ್ರಾಪ್ತರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
FIR ದಾಖಲಿಸಬೇಕೆಂದು ಆಗ್ರಹ
ಈ ಸಂಬಂಧ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟಾಟ್ ಸುಭಾಷ್ ಮತ್ತು ಡಾಗ್ ಸತೀಶ್ ವಿರುದ್ಧ ತಕ್ಷಣFIR ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.
ಜೊತೆಗೆ ವೈರಲ್ ಆಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಮೆಟಾ/ಫೇಸ್ಬುಕ್ ಸಂಸ್ಥೆಗೆ ನೋಟಿಸ್ ನೀಡಬೇಕೆಂದು ಕೂಡ ಮನವಿ ಮಾಡಲಾಗಿದೆ.

ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ
ಒಬ್ಬ ಡಾಗ್ ಬ್ರೀಡರ್. ನಿಮಗಾದರೂ ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ ಎಂದು ಹಲವರು ಡಾಗ್ ಸತೀಶ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇತ್ತೀಚೆಗೆ ಮೂತ್ರ ವಿಸರ್ಜನೆ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ ನಟ ಸುದೀಪ್ ಅವರ ಹಾಡನ್ನು ಬಳಸಿದ ಪ್ರಕರಣದಲ್ಲೂ ಡಾಗ್ ಸತೀಶ್ ವಿರೋಧಕ್ಕೆ ಗುರಿಯಾಗಿದ್ದರು.
ಇದೀಗ ಮತ್ತೊಮ್ಮೆ ವಿವಾದಾತ್ಮಕ ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾರೆ.

MUST WATCH : ತುಮಕೂರಿನಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ – ಅಧಿಕಾರಿಗಳಿಗೆ ಖಡಕ್ ಸೂಚನೆ




