War Effect : ಜನಸಾಮಾನ್ಯರಿಗೆ ಬಿಗ್ ಶಾಕ್ – ಇರಾನ್-ಇಸ್ರೇಲ್ ಯುದ್ಧದ ಬೆನ್ನಲ್ಲೇ ಈ ವಸ್ತುಗಳ ಬೆಲೆ ದಿಢೀರ್ ಏರಿಕೆ!

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪಶ್ಚಿಮ ಏಷ್ಯಾದಲ್ಲಿ, ಅದರಲ್ಲೂ ವಿಶೇಷವಾಗಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಯುದ್ಧದ ವಾತಾವರಣವು ಭಾರತದ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ದರ ಗಗನಮುಖಿಯಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಮಾಸಿಕ ಬಜೆಟ್ ಸಂಪೂರ್ಣ ಏರುಪೇರಾಗುವ ಆತಂಕ ಎದುರಾಗಿದೆ.

ಮಾರುಕಟ್ಟೆಯಲ್ಲಿ ಯಾವ್ಯಾವ ವಸ್ತುಗಳ ಬೆಲೆ ಏರಿಕೆ?
ಅಡುಗೆ ಎಣ್ಣೆ ಬೆಲೆ ದಿಢೀರ್ ಏರಿಕೆ..!
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಿಸಿ ಇದೀಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆಗೆ ತಟ್ಟಿದೆ. ಮಾರುಕಟ್ಟೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೇ ಸೈಲೆಂಟ್ ಆಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ.
ಕಳೆದ ವಾರದ ಹೋಲಿಕೆ ಮಾಡಿದರೆ ಈ ವಾರ ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 4–5 ರೂಪಾಯಿವರೆಗೆ ದಿಢೀರ್ ಏರಿಕೆಯಾಗಿದೆ.

ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಯುದ್ಧದ ಈ ಪ್ರಭಾವವು ಗ್ಯಾಸ್, ಪೆಟ್ರೋಲ್ ಮತ್ತುಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ.

ದುಬಾರಿಯಾಗಲಿದೆ ಡ್ರೈಫ್ರೂಟ್ಸ್
ಇರಾನ್ ಹಾಗೂ ಇಸ್ರೇಲ್ ನಡುವಿನ War Effect ಡ್ರೈಫ್ರೂಟ್ಸ್ ಮಾರಾಟದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಭಾರತಕ್ಕೆ ಆಮದಾಗುವ ಬಹುಪಾಲು ಒಣ ಹಣ್ಣುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ವಿಶೇಷವಾಗಿ ಇರಾನ್ನಿಂದ ಬರುತ್ತಿದ್ದ ಪಿಸ್ತಾ, ಬಾದಾಮಿ ಮತ್ತು ಅಂಜೂರದ ಬೆಲೆಗಳು ಮುಂದಿನ ದಿನಗಳಲ್ಲಿ ದಿಢೀರ್ ಏರಿಕೆಯಾಗಲಿ.
READ THIS : ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ Aadhaar Card ಪತ್ತೆ..!!

ತರಕಾರಿ ಹಾಗೂ ಬೇಳೆಕಾಳುಗಳ ಮೇಲೂ ಪ್ರಭಾವ
ಇಂಧನ ಬೆಲೆ ಏರಿಕೆಯಾದರೆ ಸಾರಿಗೆ ಮತ್ತು ಸಾಗಾಟ ವೆಚ್ಚ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ತರಕಾರಿ, ಬೇಳೆಕಾಳುಗಳು ಮತ್ತು ಇತರ ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಮೊಟ್ಟೆ ಉದ್ಯಮಕ್ಕೆ ಭಾರೀ ಸಂಕಷ್ಟ!
ಯುದ್ಧದ ಪರಿಣಾಮ ಮೊಟ್ಟೆ ಉದ್ಯಮದ ಮೇಲೂ ಬೀರಿದೆ. ಭಾರತದಿಂದ ಮಧ್ಯಪ್ರಾಚ್ಯ ದೇಶಗಳಾದ ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ಗೆ ಪ್ರತಿತಿಂಗಳು ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ರಫ್ತಾಗುತ್ತಿದ್ದವು.
ಆದರೆ, ಪ್ರಸ್ತುತ ಯುದ್ಧದ ಭೀತಿಯಿಂದ ಈ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ.

ಚಿನ್ನ ಬೆಳ್ಳಿ ದರದಲ್ಲೂ ಮತ್ತಷ್ಟು ಏರಿಕೆ
ಇನ್ನು ಯುದ್ಧದ ಎಫೆಕ್ಟ್ನಿಂದಾಗಿ ಚಿನ್ನ. ಬೆಳ್ಳಿ ದರದಲ್ಲೂ ಬೆಲೆ ಏರಿಕೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ಒಟ್ಟಾರೆ, ಜಾಗತಿಕ ಸಂಘರ್ಷಗಳು ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಆರ್ಥಿಕತೆ ಮತ್ತು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.
MUST WATCH : ತುಮಕೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ- ನಾಯಿಗಳಿಗೆ ಬಲೆ ಬೀಸಿ ಸೆರೆ ಹಿಡಿದ್ರು




