ಮಂಗಳೂರಿನ ಪುದು ಗ್ರಾಮದ ಫರಂಗಿಪೇಟೆ ಬಳಿ ನೇತ್ರಾವತಿ ನದಿ ತೀರದಲ್ಲಿ ನೂರಾರು Aadhaar Card ಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದ ನೇತ್ರಾವತಿ ನದಿ ತೀರದಲ್ಲಿ ನೂರಾರು Aadhaar Cardಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಜನರಿಗೆ ತಲುಪಬೇಕಿದ್ದ ಆಧಾರ್ ಕಾರ್ಡ್ಗಳು ನದಿ ತೀರದಲ್ಲಿ ಬಿದ್ದಿರುವುದು ಸಾರ್ವಜನಿಕರನ್ನು ಶಾಕ್ಗೆ ದೂಡಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯಲ್ಲಿ ಭಾಗದಲ್ಲಿರುವ ನೇತ್ರಾವತಿ ನದಿ ತೀರದಲ್ಲಿ ಈ ಕಾರ್ಡ್ಗಳು ಎಲ್ಲೆಂದರಲ್ಲಿ ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ಈ ಕುರಿತು ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಹಾಗೂ ಸ್ಥಳೀಯರು ಸೇರಿ ನೂರಾರು ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸಿದರು.
READ THIS : ದಾಖಲೆಯ 17ನೇ ಬಜೆಟ್ ಮಂಡಿಸಲಿರುವ Siddaramaiah – ನಿರೀಕ್ಷೆಗಳೇನು?

ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ?
ಈ ಘಟನೆಗೆ ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಸರಿಯಾದ ವಿಳಾಸಕ್ಕೆ ಆಧಾರ್ ಕಾರ್ಡ್ ತಲುಪುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ತಮ್ಮ ಕುಟುಂಬದ ಎಲ್ಲರ ಆಧಾರ್ ಕಾರ್ಡ್ಗಳೂ ನದಿ ತೀರದಲ್ಲೇ ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಹೆಸರು ಅಥವಾ ವಿಳಾಸ ಬದಲಾವಣೆ ಮಾಡಿಸಿಕೊಂಡು ಹೊಸ ಕಾರ್ಡ್ಗಾಗಿ ಕಾಯುತ್ತಿದ್ದವರು ಈಗ ಅವು ನದಿ ನೀರಲ್ಲಿ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಗ್ರಾಮಸ್ಥರ ಆಕ್ರೋಶ
ಗ್ರಾಮಸ್ಥರ ಪ್ರಕಾರ, ನೂರಾರು ಜನರ ಆಧಾರ್ ಕಾರ್ಡ್ಗಳು ನದಿಯಲ್ಲಿ ಪತ್ತೆಯಾಗಿವೆ . ಹಣ ಪಾವತಿಸಿ ಪರಿಷ್ಕರಣೆ ಮಾಡಿಸಿದ ಕಾರ್ಡ್ಗಳು ಕೂಡ ತಲುಪಿಲ್ಲ .ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದೆ . ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ಪಡೆದ U. T. Khader, ವಿಧಾನಸಭೆ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ, ಸಮಗ್ರ ತನಿಖೆಗೆ ಸೂಚಿಸಿದ್ದಾರೆ.
ಅವರು Unique Identification Authority of India (UIDAI) ಯೋಜನಾ ವ್ಯವಸ್ಥಾಪಕರಿಗೆ ತನಿಖೆ ನಡೆಸಿ ಕಾರಣ ಪತ್ತೆ ಹಚ್ಚಲು ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಕೂಡ ನಿರ್ದೇಶಿಸಿದ್ದಾರೆ.
MUST WATCH : ಕೊಂಡೋತ್ಸವದ ವೇಳೆ ಪವಾಡ..! ದೇವರ ಪವಾಡಕ್ಕೆ ಭಕ್ತರು ಬೆರಗು..! |




