ಮಂಗಳೂರಿನ ಪುನೀತ್ ಪೂಜರಿ ಪ್ರೇಮ ವೈಫಲ್ಯದಿಂದ ಒಮನ್ನಲ್ಲಿ Suicide ಮಾಡಿಕೊಂಡ ಘಟನೆ ನಡೆದಿದೆ..

ಪ್ರೇಮ ಸಂಬಂಧದ ವೈಷಮ್ಯದಿಂದ ಮನನೊಂದು 32 ವರ್ಷದ ಯುವಕ Suicide ಮಾಡಿಕೊಂಡಿರುವ ದುಃಖದ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಪುನೀತ್ ಪೂಜರಿ ಎಂದು ಗುರುತಿಸಲಾಗಿದೆ.
ಪುನೀತ್ ಕಳೆದ ಒಂದೂವರೆ ವರ್ಷದಿಂದ Oman ನಲ್ಲಿ ಲಿಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವಾ ಪ್ರದೇಶದ ಯುವತಿಯನ್ನು ಪ್ರೀತಿಸುತ್ತಿದ್ದನು.
ಇತ್ತೀಚೆಗೆ ಯುವತಿ ಕರೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
READ THIS : ರಣವೀರ್ ನಟನೆಯ ‘Dhurandhar 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

ಮೆಸೆಜ್ಗೆ ರಿಪ್ಲೈ ಇಲ್ಲ – ಮನನೊಂದು ನಿರ್ಧಾರ
ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ಮತ್ತೆ ಒಮನ್ಗೆ ಹಿಂತಿರುಗಿದ್ದ ಪುನೀತ್, ಪ್ರೇಮ ಸಂಬಂಧದ ವಿಚಾರವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದನು. ಯುವತಿ ಪ್ರೀತಿಯನ್ನು ನಿರಾಕರಿಸಿದ್ದಾಳೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆ ಮನನೊಂದು, ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಘಟನೆ ಕುರಿತು ಹೆಚ್ಚಿನ ವಿವರಗಳು ತನಿಖೆಯ ನಂತರವೇ ಸ್ಪಷ್ಟವಾಗಲಿವೆ. ಕುಟುಂಬಸ್ಥರು ಹಾಗೂ ಸ್ನೇಹಿತರು ತೀವ್ರ ಶೋಕದಲ್ಲಿದ್ದಾರೆ.
MUST WATCH : DEADLYATTACK ON FRIEND|ʼಪ್ರಾಣʼಸ್ನೇಹಿತ ಅಂದುಕೊಂಡವನೇ ವಿಲನ್ ಆದ್ನಾ..?




