‘ವಿರೋಶ್’ ಸಂಗೀತ್ ಸಂಭ್ರಮದ ಫೋಟೋಗಳು ವೈರಲ್; ʻಆ ರಾತ್ರಿ ನಮಗೆ ಮರೆಯಲಾಗದ ಮೋಜಿನ ಕ್ಷಣʼ ಎಂದ Vijay – Rashmika.


ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಅವರು ತಮ್ಮ ಆರತಕ್ಷತೆ (Reception)ಗೆ ತಯಾರಾಗುತ್ತಿದ್ದಾರೆ.

ಅತ್ಯಂತ ಮೋಜಿನ ರಾತ್ರಿಯಾಗಿತ್ತು!
ಈ ನಡುವೆ, ಅವರ ಸಂಗೀತ್ ಸಮಾರಂಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಸಮಾರಂಭದಲ್ಲಿ ದಂಪತಿಗಳು ಪರಸ್ಪರ ಅಚ್ಚರಿ ನೀಡುವಂತೆ ಪ್ಲಾನ್ ಮಾಡಿದ್ದರು. “ಆರಾತ್ರಿ ಪ್ರೀತಿ, ಆನಂದಬಾಷ್ಪ, ನಗು, ಸಂಗೀತ, ಹಾಡು ಮತ್ತುಮಿಂಚಿನ ಓಕುಳಿಯಿಂದ ತುಂಬಿತ್ತು. ನಾವು ರಾತ್ರಿಯಿಡೀ ಕುಣಿದು ಕುಪ್ಪಳಿಸಿದೆವು. ನಿಜವಾಗಿಯೂ ಇದು ನಮ್ಮ ಜೀವನದ ಅತ್ಯಂತ ಮೋಜಿನ ರಾತ್ರಿಯಾಗಿತ್ತು!” ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ನಮ್ಮೊಳಗಿನ ‘ಡ್ರ್ಯಾಗನ್’ಗಳನ್ನು ಹೊರತಂದವು
“ಈ ಬಟ್ಟೆಗಳು ನಮ್ಮೊಳಗಿನ ‘ಡ್ರ್ಯಾಗನ್’ಗಳನ್ನು ಹೊರತಂದವು. ನಾನು ಬೆಳಗಿನ ಜಾವ 4 ಗಂಟೆಯವರೆಗೂ ಆ ಉಡುಪಿನಲ್ಲೇ ಇದ್ದೆ..” ಎಂದು ತಮ್ಮ ಕಾಸ್ಟ್ಯೂಮ್ ಬಗ್ಗೆಯೂ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.

ಅದ್ದೂರಿ ಆರತಕ್ಷತೆ
ಸಂಗೀತ್ ಸಮಾರಂಭದಲ್ಲಿ ಕುಟುಂಬ ಹಾಗೂ ಸ್ನೇಹಿತರಿಂದ ನೀಡಲಾದ ಸರ್ಪ್ರೈಸ್, ನೃತ್ಯ ಮತ್ತು ಸಂಭ್ರಮವೇ ಜೋಡಿಗೆ ವಿಶೇಷವಾಗಿ ನೆನಪಿನಲ್ಲಿ ಉಳಿಯಲಿದೆ. ಈ ಸಂಭ್ರಮದ ಬೆನ್ನಲ್ಲೇ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ.
ಇದನ್ನು ಓದಿ : ಗ್ರಹಣ ಕಾಲದಲ್ಲೂ ತೆರೆದಿರುವ Srikalahasti ದೇವಾಲಯದ ವಿಶೇಷತೆ..!

Vijay – Rashmika ಮೊದಲ ಬಾರಿಗೆ 2018ರಲ್ಲಿ ಒಂದಾಗಿ ಸಿನಿಮಾ ಮಾಡಿದ್ದಾರೆ. ಆ ನಂತರ ಪ್ರೀತಿ ಬೆಳೆಯಿತು ಮತ್ತು ಇದೀಗ ಅವರ ಹೊಸ ಜೀವನದ ಪ್ರಾರಂಭವಾಗಿದೆ.


ಇದನ್ನು ನೋಡಿ : ಕೆರೆಯಲ್ಲಿ ತೇಲಿದ ವೃದ್ಧೆಯ ಶ* – ಬೆಳ್ಳಂ ಬೆಳಗ್ಗೆ ಬೆಚ್ಚಿಬಿದ್ದ ಜನರು




