ಮಂಡ್ಯ: ಕೌಟುಂಬಿಕ ಕಲಹಕ್ಕೆ ತೀವ್ರ ಖಿನ್ನತೆಯಿಂದ ಮನೋವೈದ್ಯ Suicide!

Mandya Suicide : ಮೈಸೂರಿನ ಖಾಸಗಿ ವೈದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮನೋವೈದ್ಯ, ಕೌಟುಂಬಿಕ ಕಲಹಕ್ಕೆ ತೀವ್ರ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಇನ್ನು ಮೃತ ದುರ್ದೈವಿಯನ್ನು ಕೆ.ಆರ್.ನಗರ ಮೂಲದ ಸುಖದೇವ್ (53) ಎಂದು ಗುರುತಿಸಲಾಗಿದೆ.
ಮಾತ್ರೆಗಳ ಔಷಧ ಸೇವಿಸಿ ಸಾವು
ಸುಖದೇವ್ ಅವರು ನಗರದ ಹರಿಪ್ರಿಯ ಹೊಟೇಲ್ನಲ್ಲಿ ರೂಂ ಪಡೆದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮದ್ಯ ಸೇವನೆ ಮಾಡಿ, ಸುಮಾರು 30 ಮಾತ್ರೆಗಳ ಔಷಧಗಳನ್ನು ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Sudeep ಬಗ್ಗೆ ಅವಹೇಳನ ಆರೋಪ – ಡಾಗ್ ಸತೀಶ್ ವಿರುದ್ಧ ರಜತ್ ದೂರು
ಪ್ರಕರಣ ದಾಖಲು – Suicide
ಇನ್ನು ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ವಶಕ್ಕೆ ಪಡೆದು ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಈ ಘಟನೆ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.

ಇದನ್ನು ನೋಡಿ : ಕ್ಯಾನ್ಸರ್ ಪೀಡಿತ ಬಾಲಕಿಯ ಆಧಾರ್ ತಿದ್ದುಪಡಿ – ಬಾಲಕಿಯ ಚಿಕಿತ್ಸೆಗೆ ಪರೋಕ್ಷವಾಗಿ ನೆರವಾದ ಪ್ರಜಾಶಕ್ತಿ




