ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ Rajath ದೂರು.

ಬಿಗ್ ಬಾಸ್ ಸ್ಫರ್ಧಿ ಡಾಗ್ ಸತೀಶ್ ವಿರುದ್ಧ ದೂರು ಕೋಡೋದಕ್ಕೆ ಮುಂದಾಗಿದ್ದಾರೆ ಬಿಗ್ ಬಾಸ್ನ ರಜತ್ ಕಿಶನ್. ನಟ ಸುದೀಪ್ ಅಭಿನಯದ ಚಿತ್ರದ ಹಾಡನ್ನು ಶೌಚಾಲಯದ ವಿಡಿಯೋಗೆ ಬಳಸಿಕೊಂಡು ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ‘ಡಾಗ್ ಸತೀಶ್’ ವಿರುದ್ಧ Rajath ದೂರು ನೀಡಿದ್ದಾರೆ.

ಬನಶಂಕರಿ ಪೊಲೀಸ್ ಠಾಣೆಗೆ ದೂರು!
ಸುದೀಪ್ ಅಭಿಮಾನಿಗಳ ಸಂಘದೊಂದಿಗೆ ಬನಶಂಕರಿ ಪೊಲೀಸ್ ಠಾಣೆಗೆ ಬಂದ ರಜತ್ ಕಿಶನ್ ಹಾಗೂ ಧನರಾಜ್, ಡಾಗ್ ಸತೀಶ್ ವಿರುದ್ಧ ಅಧಿಕೃತ ದೂರು ಸಲ್ಲಿಸಿದ್ದಾರೆ. ಪೊಲೀಸರು ಚೆನ್ನಮ್ಮನ ಅಚ್ಚುಕಟ್ಟು ಠಾಣೆಗೆ ದೂರು ಕೊಡುವಂತೆ ಸೂಚಿಸಿದ್ದಾರೆ.
ಇದನ್ನು ಓದಿ : PUC ಪರೀಕ್ಷೆಗೆ ಹೋಗುವ ಸಂದರ್ಭದಲ್ಲೇ ವಿದ್ಯಾರ್ಥಿನಿಗೆ ಹೃದಯಾಘಾತ!

“Rajath ನ ನಾನು ಚೆನ್ನಾಗಿ ರೋಸ್ಟ್ ಮಾಡಿದ್ದೇನೆ”
ಇನ್ನು ದೂರಿನಲ್ಲಿ, ‘ಕಿಚ್ಚ ಸುದೀಪ್’ ಚಿತ್ರದ ಹಾಡನ್ನು ಬೇಕಾಬಿಟ್ಟಿಯಾಗಿ ಎಡಿಟ್ ಮಾಡಿ ಶೌಚಾಲಯದ ವಿಡಿಯೋಗೆ ಹಾಕಿದ್ದಾರೆ. ಅಲ್ಲದೆ, ಕೆಲವು ಸಂದರ್ಶನಗಳಲ್ಲಿ ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ವೈಯಕ್ತಿಕ ತೇಜೋವಧೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, “ರಜತ್ನ ನಾನು ಚೆನ್ನಾಗಿ ರೋಸ್ಟ್ ಮಾಡಿದ್ದೇನೆ” ಎಂದು ಡಾಗ್ ಸತೀಶ್ ಹೇಳಿಕೆ ನೀಡಿದ್ದಾರೆ ಎಂಬುದನ್ನೂ ರಜತ್ ಕಿಶನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಪ್ರಕರಣದ ಕುರಿತು ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನು ನೋಡಿ : ತುಮಕೂರಿನಲ್ಲಿ ಗ್ಯಾರಂಟಿ ಯೋಜನೆ ಕಾರ್ಯಾಗಾರ ಯಾರ್ ಯಾರ್ ಬಂದಿದ್ರು..?




