ದ್ವಿತೀಯ PUC ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ.

Belagavi : ದ್ವಿತೀಯ PUC ಪರೀಕ್ಷೆ ಇಂದಿನಿಂದ ಶುರುವಾಗ್ತಾಇದ್ದು, ವಿದ್ಯಾರ್ಥಿಗಳೆಲ್ಲರೂ ಬಾರಿ ಉತ್ಸಾಹದಿಂದ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಭವಿಷ್ಯದ ನೂರಾರು ಕನಸು ಕಟ್ಟಿಕೊಂಡು, ಈ ಬಾರಿ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಬೆಳಗ್ಗೆಯಿಂದಲೇ ಸಂತಸದಿಂದ ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ ಚಿಕ್ಕೋಡಿಯ ಬಂಬಲವಾಡ ಗ್ರಾಮದಲ್ಲಿ ನಡೆದಿದ್ದೇ ಬೇರೆ!

ಇದನ್ನು ಓದಿ : ಕೋಟಿ ಕೋಟಿ ಹಣ ಗ್ರಾಹಕರಿಂದ ಸಂಗ್ರಹಿಸಿ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್!
ನೂರಾರು ಕನಸು ಕಂಡಿದ್ದ PUC ವಿದ್ಯಾರ್ಥಿನಿ
ಪರೀಕ್ಷೆಗೆ ನೂರಾರು ಕನಸು ಕಟ್ಟಿಕೊಂಡು ಹೊರಟಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಬೆಲಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನಡೆದಿದೆ.ಪರೀಕ್ಷೆಗೆ ಸಕಲ ತಯಾರಿ ಮಾಡಿಕೊಂಡಿದ್ದ 17 ವರ್ಷದ ಭೂಮಿಕಾ ಮಾಳಂಗಿ, ಇಂದು ಉತ್ಸಾಹದಿಂದಲೇ ಪರೀಕ್ಷೆಗೆ ಹೊರಡಲು ತಯಾರಾಗಿದ್ದರು. ಆದ್ರೆ ವಿಧಿಯ ಆಟ ಬೇರೆಯೇ ಆಗಿತ್ತು. ಸ್ನಾನ ಮುಗಿಸಿ ಮನೆಯಿಂದ ಹೊರಬರುತ್ತಿದ್ದಾಗಲೇ ಹಠಾತ್ತನೇ ಹೃದಾಯಾಘಾತ ಸಂಭವಿಸಿದೆ.

ಶೋಕದ ವಾತವರಣ
ಇನ್ನು ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸುವ ವೇಳೆ ಆಕೆ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾರೆ. ಈ ದುರ್ಘಟನೆಯಿಂದ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಶೋಕದ ವಾತವರಣ ತುಂಬಿದೆ. ಭವಿಷ್ಯದಲ್ಲಿ ಸಾಕಷ್ಟು ಕನಸು ಕಂಡಿದ್ದ ವಿದ್ಯಾರ್ಥಿನಿ ಈ ರೀತಿ ಸಾವನ್ನಪ್ಪಿದ್ದು ನಿಜಕ್ಕೂ ದುರಂತ.
ಇದನ್ನು ನೋಡಿ : ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಜಿಲ್ಲೆಯಲ್ಲಿ ಎಷ್ಟು ಮಂದಿ ಎಕ್ಸಾಂ ಬರೆದ್ರು ?




