Hassan : ಎಫ್ಡಿ ಮೇಲೆ ಸಾಲ ಕೊಡಿಸೋದಾಗಿ ಹೇಳಿ ವಂಚನೆ!

ನಿಗದಿತ ಠೇವಣಿ ಮೇಲೆ ಸಾಲ ಕೊಡಿಸೋದಾಗಿ ಹೇಳಿ 50ಕ್ಕೂ ಅಧಿಕ ಗ್ರಾಹಕರಿಂದ 3 ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡಿ ವಂಚಿಸಿರುವ ಆರೋಪ Hassan ನಗರದ ಖಾಸಗಿ ಬ್ಯಾಂಕ್ ವಿರುದ್ಧ ಕೇಳಿಬಂದಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಬ್ಯಾಂಕ್ ಮ್ಯಾನೇಜರ್ ಹೆಚ್.ಎಸ್.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾಗೆ ದೂರು ನೀಡಲಾಗಿದೆ. ಎಫ್ಡಿ ಇಡುವಂತೆ ಹೇಳಿ ಕೋಟ್ಯಂತರ ಹಣ ಸಮೇತ ಮ್ಯಾನೇಜರ್ ನಾಪತ್ತೆಯಾಗಿರೋದಾಗಿ ಆರೋಪಿಸಲಾಗಿದೆ.
ಗ್ರಾಹಕರು ಎಫ್ಡಿ ಮಾಡಿದ್ದ ಹಣಕ್ಕೆ ದಾಖಲೆ ಇಲ್ಲ!
ಬ್ಯಾಂಕ್ನಲ್ಲಿ ಎಫ್ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವುದಾಗಿ ಆಮೀಷವನ್ನು ಗ್ರಾಹಕರಿಗೆ ಬ್ಯಾಂಕ್ ಮ್ಯಾನೇಜರ್ ಪೂಜಾ ಒಡ್ಡಿದ್ದರು. ಜೊತೆಗೆ 25ಲಕ್ಷ ಲೋನ್ ಗೆ 10 ಲಕ್ಷ ಸಬ್ಸಿಡಿ ಎಂದು ನಂಬಿಸಿ ಜನರಿಂದ ಹಣ ಸಂಗ್ರಹ ಮಾಡಿದ್ದರು.
ಇವರ ಮಾತುಗಳನ್ನ ನಂಬಿ ಬ್ಯಾಂಕ್ನಲ್ಲಿ ಜನ ಹಣ ಇಟ್ಟಿದ್ದು, ಎಫ್ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್ ನೀಡದ ಆರೋಪವು ಕೇಳಿಬಂದಿದೆ. ಗ್ರಾಹಕರು ಹಣ ವಾಪಸ್ ಕೇಳಿದಕ್ಕೆ ಕೆಲವರಿಗೆ ಚೆಕ್ ನೀಡಿ ಪೂಜಾ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆ ಹಾಸನದ ಪೆನ್ಸನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ಓದಿ : ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ PUC ಪರೀಕ್ಷೆ ಆರಂಭ – ಅಕ್ರಮ ತಡೆಗೆ ಕಟ್ಟೆಚ್ಚರ

ವಿದೇಶಕ್ಕೆ ಪರಾರಿಯಾಗಲು ಯತ್ನ!
ಇನ್ನು ಹಣ ಸಂಗ್ರಹದ ಬಳಿಕ ಆರೋಪಿ ಹೆಚ್.ಎಸ್.ಪೂಜ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ದುಬೈಗೆ ಹಾರಲು ಅವರು ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿರುನ ಮಾಹಿತಿಯಿದ್ದು, ಅವರು ಪರಾರಿಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು.
ಅವರ ಪಾಸ್ ಪೋರ್ಟ್ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಲೇಬೇಕು. ಸಾಲ ಕೊಡಿಸುವ ಆಮಿಷವೊಡ್ಡಿ ಗ್ರಾಹಕರನ್ನು ವಂಚಿಸಿರುವ ಆಕೆಯನ್ನು ಬಂಧಿಸಿ, ತಮಗೆ ನ್ಯಾಯ ಕೊಡೊಸಬೇಕು ಎಂದು ಸೂರ್ಯದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರು ಎಸ್ಪಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇದನ್ನು ನೋಡಿ : ತುಮಕೂರಿನಲ್ಲಿ ನೀರಿಗಾಗಿ ಹಾಹಾಕಾರ – ಬಿಂದಿಗೆ ಹಿಡಿದು ಪಾಲಿಕೆ ವಿರುದ್ಧ ಆಕ್ರೋಶ




