ರಾಜ್ಯಾದ್ಯಂತ ದ್ವಿತೀಯ PUC ಪರೀಕ್ಷೆ ಆರಂಭ – Tumakuru ಜಿಲ್ಲೆಯಾದ್ಯಂತ 41 ಕೇಂದ್ರಗಳಲ್ಲಿ ಪರೀಕ್ಷೆ ಶುರು.

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ PUC ಪರೀಕ್ಷೆಗಳು ಆರಂಭವಾಗಿದ್ದು, Tumakuru ಜಿಲ್ಲೆಯಲ್ಲೂ ಸಹ ಪರೀಕ್ಷೆಗಳು ಶಾಂತವಾಗಿ ಪ್ರಾರಂಭವಾಗಿವೆ. ಜಿಲ್ಲೆಯಲ್ಲಿ ಒಟ್ಟು 41 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 24,753 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇಂದು ಕನ್ನಡ ವಿಷಯ ಪರೀಕ್ಷೆ ನಡೆಯುತ್ತಿದ್ದು, ನಗರದ ಪ್ರಮುಖ ಪರೀಕ್ಷಾ ಕೇಂದ್ರಗಳಾದ ಎಂಪ್ರೆಸ್ ಕಾಲೇಜು ಸೇರಿದಂತೆ ಹಲವು ಪರೀಕ್ಷಾ ಕೇಂದ್ರಗಳ ಬಳಿ ಬೆಳಗ್ಗಿನಿಂದಲೇ ವಿದ್ಯಾರ್ಥಿಗಳು ಹಾಜರಿದ್ರು.
ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ
ಇನ್ನು ಜಿಲ್ಲೆಯಲ್ಲಿ 22,851 ಮಂದಿ ಹೊಸ ವಿದ್ಯಾರ್ಥಿಗಳು, 285 ಖಾಸಗಿ ವಿದ್ಯಾರ್ಥಿಗಳು, 1,606 ಪುನರಾವರ್ತಿತರು ಹಾಗೂ 11 ಮಂದಿ ಫಲಿತಾಂಶ ಸುಧಾರಣಾ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯ ಎರಡು ಶೈಕ್ಷಣಿಕ ವಿಭಾಗಗಳ ಪೈಕಿ ತುಮಕೂರು ವಿಭಾಗದಲ್ಲಿ 30 ಪರೀಕ್ಷಾ ಕೇಂದ್ರಗಳು ಹಾಗೂ ಮಧುಗಿರಿ ವಿಭಾಗದಲ್ಲಿ 11 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಅಲ್ದೇ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ನಿಗಾ ವಹಿಸಲಾಗಿದೆ.
ಇದನ್ನು ಓದಿ : ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದಕ್ಕೆ ಹೆದರಿ ನೇಣಿಗೆ ಕೊರಳೊಡ್ಡಿದ್ರಾ ಟೆಕ್ಕಿ?

ಮಾರ್ಚ್ 17ರವರೆಗೆ ಪರೀಕ್ಷೆ
ಇನ್ನು ವರ್ಷವಿಡೀ ಅಭ್ಯಾಸ ನಡೆಸಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಉತ್ತಮ ತಯಾರಿ ಮಾಡಿಕೊಂಡಿರುವುದಾಗಿ ಹೇಳಿ ಸಂತಸ ವ್ಯಕ್ತಪಡಿಸಿದ್ರು.
ಪೋಷಕರು ಕೂಡ ಮಕ್ಕಳಿಗಾಗಿ ಪರೀಕ್ಷಾ ಕೇಂದ್ರಗಳ ಬಳಿ ಬಂದಿರುವ ದೃಶ್ಯ ಕಂಡು ಬಂದ್ವು. ಅಲ್ದೇ ಜಿಲ್ಲೆಯಲ್ಲಿ ಮಾರ್ಚ್ 17ರವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಪ್ರಜಾಶಕ್ತಿ ಟಿವಿಯ ಜೊತೆ ಸಂತಸವನ್ನ ಹಂಚಿಕೊಂಡರು.
ಬಿಗಿ ಪೊಲೀಸ್ ಬಂದೋಬಸ್ತ್
ಇನ್ನು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಸಿದ್ಧತೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ.
ಅಲ್ದೇ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಅಂಗಡಿಗಳನ್ನ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಒಟ್ಟಾರೆ ಈ ಬಾರಿ ತುಮಕೂರಿಗೆ ಅತಿ ಹೆಚ್ಚು ಫಲಿತಾಂಶ ಬರುವ ನಿರೀಕ್ಷೆ ಇದೆ.

ಇದನ್ನು ನೋಡಿ : ಸರ್ಕಾರಿ ಶಾಲೆಯಲ್ಲಿ ಇದೆಂಥಾ ಅವ್ಯವಸ್ಥೆ ನಿತ್ಯ ಜೀವಭಯದಲ್ಲೇ ಮಕ್ಕಳ ವಿದ್ಯಾಬ್ಯಾಸ




