ಬೆಳ್ಳಂ ಬೆಳಗ್ಗೆ ರಾಜ್ಯದ 6 ಕಡೆ ED ಭರ್ಜರಿ ರೇಡ್ – ಸತೀಶ್ ಜಾರಕಿಹೊಳಿಯ ಭಾವನ ಮನೆ ಮೇಲೆ ದಾಳಿ

ರಾಜ್ಯದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಬೆಳಗಾವಿ, ಮೈಸೂರು, ಬೆಂಗಳೂರು, ಅರಸೀಕೆರೆ ಸೇರಿ ಸುಮಾರು ಆರು ಕಡೆ ED ಅಧಿಕಾರಿಗಳು ಭರ್ಜರಿ ದಾಳಿ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ವೈ ಮಂಜುನಾಥ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ
ಬೇನಾಮಿ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಬೆಳಗಾವಿಯ ಅಬಕಾರಿ ಹೆಚ್ಚುವರಿ ಆಯುಕ್ತರಾಗಿರುವ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ ವೈ ಮಂಜುನಾಥ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಂದು ಮುಂಜಾನೆ 5:30ರ ಸುಮಾರಿಗೆ ಏಕಕಾಲದಲ್ಲಿ ಬೆಳಗಾವಿ, ಮೈಸೂರು, ಬೆಂಗಳೂರು, ಅರಸೀಕೆರೆ ಸೇರಿದಂತೆ ಒಟ್ಟು 6 ಪ್ರಮುಖ ಸ್ಥಳಗಳಲ್ಲಿ ದಾಳಿ ಮಾಡಿದರು.
ಇದನ್ನು ಓದಿ : DRI ಬಳಿಕ ನಟಿ ರನ್ಯಾರಾವ್ಗೆ ಎದುರಾಯ್ತು ED ಸಂಕಷ್ಟ..!

ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದಿಸಿರುವ ಆರೋಪ
ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ವೈ. ದೇವೇಂದ್ರಪ್ಪ ಅವರ ಪುತ್ರ ಆಗಿರುವ ವೈ. ಮಂಜುನಾಥ್ ವಿರುದ್ಧ ಲಂಚದ ಆರೋಪ, ಅಕ್ರಮ ಹೂಡಿಕೆ ಹಾಗೂ ಬೇನಾಮಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವ ಗಂಭೀರ ದೂರುಗಳು ಕೇಳಿಬಂದಿದ್ದವು.

ED Raid – ಪ್ರಮುಖ ದಾಖಲೆಗಳನ್ನು ವಶಕ್ಕೆ
ಈ ಆರೋಪದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಬೆಂಗಳೂರಲ್ಲಿರುವ ಮಂಜುನಾಥ್ಗೆ ಸೇರಿದ ಅಪಾರ್ಟ್ಮೆಂಟ್ ಮೇಲೆ, ಮೈಸೂರು, ಅರಿಸಿಕೇರೆ ಹಾಗೂ ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ ಸ್ನೇಹಿತರ ಮನೆ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ರು. ಪರಿಶೀಲನೆ ಬಳಿಕ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ನೋಡಿ : ನಶಾಮುಕ್ತ ತುಮಕೂರಿಗೆ ಮಹತ್ವದ ಹೆಜ್ಜೆ – DRUGS MAFIAಗೆ ಪೊಲೀಸರ MASTER PLAN




