ಬೆಚ್ಚಿ ಬೀಳಿಸುವ ಘಟನೆ – ಮಗನಿಂದಲೇ ತಂದೆಯ ಬರ್ಬರ Murder.

ಸಾಮಾನ್ಯವಾಗಿ ಪೋಷಕರಿಗೆ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ನೌಕರಿ ಪಡೆಯಬೇಕೆಂಬ ಕನಸಿರುತ್ತದೆ. ಕೆಲವೊಮ್ಮೆ ತಾವು ಸಾಧಿಸಲಾಗದ್ದನ್ನು ಅವರು ಸಾಧಿಸಲಿ ಎನ್ನುವ ಬಯಕೆಯೂ ಇರುತ್ತದೆ.
ಬೆಚ್ಚಿ ಬೀಳಿಸುವ ಘಟನೆ
ಆದರೆ ಆ ಆಸೆಯನ್ನು ಹೇಳಿಕೊಂಡ ತಂದೆಯನ್ನೇ ಮಗನೊಬ್ಬ Murder ಮಾಡಿರುವ ಘಟನೆ ಲಕ್ನೋ ನಗರದ ಆಶಿಯಾನಾ ನಗರವನ್ನೇ ಬೆಚ್ಚಿ ಬೀಳಿಸಿದೆ. 49 ವರ್ಷದ ಉದ್ಯಮಿ ಮನ್ವೆಂದ್ರ ಸಿಂಗ್ ಅವರನ್ನು ಅವರ 21ವರ್ಷದ ಪುತ್ರ ಅಕ್ಷತ್ ಸಿಂಗ್ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ತಂದೆಯನ್ನೇ ಗುಂಡಿಟ್ಟು ಕೊಂದ ಪಾಪಿ ಮಗ!
ಇನ್ನು ಮನ್ವೇಂದ್ರ ಸಿಂಗ್ ಉದ್ಯಮಿ ಮತ್ತು ರೋಗಶಾಸ್ತ್ರ ಪ್ರಯೋಗಾಲಯ ನಿರ್ವಾಹಕ ಆಗಿದ್ದರು. ಈ ಪ್ರಕರಣ ಫಬ್ರವರಿ 20 ರಂದು ಪ್ರಾಂರಭಾವಾಯಿತು. ಮನ್ವೇಂದ್ರ ಸಿಂಗ್ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಮಗನೇ ಪೊಲೀಸ್ ಠಾಣೆಗೆ ಹೋಗಿ ತಂದ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದನು.
ಇನ್ನು ದೂರಿನ ಮೇರಿಗೆ ಪೊಲೀಸರು ತನಿಖೆ ಆರಂಭಿಸಿದರು. ಅಕ್ಷತ್ನ ಪದೇ ಪದೇ ವಿಚಾರಣೆಗೆ ಕರೆದಾಗ ಅವರನ ಹೇಳಿಕೆಗಳಲ್ಲಿ ಅನುಮಾನ ಬರುವಂತಹ ಮಾತುಗಳು ಕಂಡು ಬಂದವು. ಮೊದಲು ತಂದೆ ಎಲ್ಲಿ ಹೋದರು ಎಂದು ತಿಳಿಯದು ಎಂದು ಹೇಳಿದನು. ಬಳಿಕ ಪೊಲೀಸರ ಕಠಿಣ ವಿಚಾರಣೆಯ ನಂತರ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ಧಾನೆ.
ಇದನ್ನು ಓದಿ : ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ Brian Bennett

ದೇಹ ಪೀಸ್ ಪೀಸ್ ಮಾಡಿ ಡ್ರಂನಲ್ಲಿ ಬಚ್ಚಿಟ್ಟ!
ಮನ್ವೇಂದ್ರ ಸಿಂಗ್ ತನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ, ಮಗ ಅದಕ್ಕೆ ವಿರೋಧಿಸಿದ್ದ. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಯುವಕ ಒಮ್ಮೆ ಮನೆಯಿಂದ ಓಡಿಹೋಗಿದ್ದ. ಮತ್ತೆ ಮನೆಗೆ ವಾಪಸ್ ಬಂದಾಗ, ತಂದೆ ಮತ್ತು ಮಗನ ನಡುವೆ ಮತ್ತೆ ಜಗಳವಾಗಿದೆ.
ಈ ವೇಳೆ ಅಕ್ಷತ್ ತನ್ನ ತಂದೆಗೆ ರೈಫಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಕೊಂಡೊಯ್ದು, ಖಾಲಿ ಕೋಣೆಯಲ್ಲಿ ತುಂಡರಿಸಿದ್ದಾರೆ. ಸಹೋದರಿ ಮುಂದೆಯೇ ತಂದೆಯ ದೇಹವನ್ನು ತುಂಡರಿಸಿದ್ದಾರೆ. ವಿಚಾರವನ್ನು ಯಾರಿಗೂ ಹೇಳದಂತೆ ಸಹೋದರಿಗೆ ಬೆದರಿಕೆ ಹಾಕಿದ್ದ. ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಿದ್ದ. ಮುಂಡ ಸೇರಿದಂತೆ ಕೆಲವು ಭಾಗಗಳನ್ನು ಮೊನೆಯೊಳಗೆ ಇಟ್ಟಿದ್ದ ನೀಲಿ ಡ್ರಮ್ನಲ್ಲಿ ಹಾಕಿದ್ದ.

ಇದನ್ನು ನೋಡಿ : TUMAKURU|ಆ ಗ್ರಾಮಕ್ಕೆ ಹೋಗಲು ರಸ್ತೆಯೇ ಇಲ್ಲ ರಸ್ತೆಗೆ ಜಾಗ ಬಿಡಲು ಒಪ್ಪದ ಮಾಲೀಕ




