ಝಿಂಬಾಬ್ವೆ ತಂಡದ ಯುವ ದಾಂಡಿಗ Brian Bennett ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಟಿ20 ವಿಶ್ವಕಪ್ನಲ್ಲಿ ಝಿಂಬಾಬ್ವೆ ತಂಡದ ಆರಂಭಿಕ ದಾಂಡಿಗ ಬ್ರಿಯಾನ್ ಬೆನ್ನೆಟ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಬರೋಬ್ಹರಿ 180 ರನ್ಗಳನ್ನು ಪೇರಿಸುವ ಮೂಲಕ.
ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಔಟ್ ಆಗುವ ಮುನ್ನ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಬ್ರಿಯಾನ್ ಹೆಸರಿಗೆ ಸೇರ್ಪಡೆಯಾಗಿದೆ.
ಮೂರು ಇನಿಂಗ್ಸ್ಗಳಲ್ಲಿ ಔಟ್ ಆಗದೆ ಮಿಂಚಿದರು
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಮಾನ್ ವಿರುದ್ಧ ಅಜೇಯ 48 ರನ್ಗಳಿಂದ ಟೂರ್ನಿಯನ್ನು ಆರಂಭಿಸಿದ Brian Bennett, ಬಳಿಕ ಆಸ್ಟ್ರೇಲಿಯಾ ವಿರುದ್ಧ ಅಜೇಯ 64 ರನ್ಗಳಿಸಿದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಅಜೇಯ 63 ರನ್ ಬಾರಿಸಿ ಮೊದಲ ಮೂರು ಇನಿಂಗ್ಸ್ಗಳಲ್ಲಿ ಔಟ್ ಆಗದೆ ಮಿಂಚಿದರು.

180 ರನ್ ಕಲೆ
ಆದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧನಡೆದ ಪಂದ್ಯದಲ್ಲಿಕೇವಲ5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ನಾಲ್ಕು ಇನಿಂಗ್ಸ್ಗಳಲ್ಲಿ48, 64, 63, 5 ರನ್ ಸೇರಿಸಿ ಒಟ್ಟು 180 ರನ್ ಕಲೆಹಾಕಿದ್ದಾರೆ.
ವಿಶ್ವ ದಾಖಲೆ
ಈ ಸಾಧನೆಯ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಔಟ್ ಆಗುವ ಮುನ್ನ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಯನ್ನು ಬ್ರಿಯಾನ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ಓದಿ : CJ Roy ಕೇಸ್ – ಆತ್ಮಹತ್ಯೆ ಹಿಂದಿನ ಕಾರಣ ಮೇಲ್ನೋಟಕ್ಕೆ ರಿವೀಲ್

ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ Brian Bennett
ಇದಕ್ಕೂ ಮುನ್ನ ಈ ದಾಖಲೆ ಭಾರತದ ಸ್ಟಾರ್ ಬ್ಯಾಟರ್ Virat Kohli ಅವರ ಹೆಸರಿನಲ್ಲಿತ್ತು. 2022ರ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಮೊದಲ ಮೂರು ಇನಿಂಗ್ಸ್ಗಳಲ್ಲಿ 82*, 62*, 12 ರನ್ಗಳಿಸಿ ಒಟ್ಟು 156 ರನ್ ಕಲೆಹಾಕಿದ್ದರು.
ಈಗ 180 ರನ್ಗಳೊಂದಿಗೆ ಬ್ರಿಯಾನ್ ಬೆನ್ನೆಟ್, ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದು ಟಿ20 ವಿಶ್ವಕಪ್ನಲ್ಲಿ ಔಟ್ ಆಗುವ ಮುನ್ನ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇದನ್ನು ನೋಡಿ : TUMAKURU|ತುಮಕೂರಿನಲ್ಲಿ ಬ್ಯಾನರ್ಗಳದ್ದೇ ಕಾರುಬಾರು- ಬ್ಯಾನರ್ಗಳಿಂದ ಸಾಕಷ್ಟು ತೊಂದ್ರೆ




