CJ Roy ಆತ್ಮಹತ್ಯೆ ಕೇಸ್ ತನಿಖೆ ಬಹುತೇಕ ಮುಕ್ತಾಯವಾಗಿದೆ.

ಖ್ಯಾತ ಉದ್ಯಮಿ C. J. Roy ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದೆ. ಎಸ್ಐಟಿ ಅಧಿಕಾರಿಗಳ ಇಲ್ಲಿಯವರೆಗಿನ ತನಿಖೆಯಲ್ಲಿ ರಾಯ್ ಆತ್ಮಹತ್ಯೆ ಹಿಂದಿನ ಕಾರಣಗಳು ಮೇಲ್ನೋಟಕ್ಕೆ ರಿವೀಲ್ ಆಗಿದೆ.
ಆತ್ಮಹತ್ಯೆ ಹಿಂದಿನ ಕಾರಣ ಮೇಲ್ನೋಟಕ್ಕೆ ರಿವೀಲ್
ಎಸ್ಐಟಿ ಮೂಲಗಳ ಮಾಹಿತಿ ಅನ್ವಯ, ಲೈಫ್ಸ್ಟೈಲ್ ಸಂಬಂಧಿತ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ವ್ಯವಹಾರಿಕ ತೊಂದರೆಗಳು ಸೇರಿದಂತೆ ಹಲವು ಕಾರಣಗಳು ರಾಯ್ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿವಿಧ ವೈಯಕ್ತಿಕ ಹಾಗೂ ವೃತ್ತಿಪರ ಸಮಸ್ಯೆಗಳು ಒಟ್ಟಾಗಿ ಮಾನಸಿಕವಾಗಿ ಪರಿಣಾಮ ಬೀರಿದ್ದವು ಎನ್ನಲಾಗಿದೆ.
ಇದನ್ನು ಓದಿ : ಟಾಕ್ಸಿಕ್ಗೆ ರವಿ ಬಸ್ರೂರು ಸೇರಿ ಐದು ಮಂದಿ ಸಂಗೀತ – Zee ಮ್ಯೂಸಿಕ್ ಪಾಲಾದ ಆಡಿಯೋ ಹಕ್ಕು

ಹೆಚ್ಚಿನ ವಿವರಗಳು ಹೊರಬರುವ ಸಾಧ್ಯತೆ
ತನಿಖೆಯ ಭಾಗವಾಗಿ, ರಾಯ್ Suicide ಮಾಡಿಕೊಂಡಿದ್ದ ಕೊಠಡಿಯಿಂದ ಪತ್ತೆಯಾದ ಡೈರಿ, ಬಳಸಿದ ಪಿಸ್ತೂಲ್, ಮೊಬೈಲ್ ಫೋನ್, ರೂಂ ಲಾಕರ್ ಸೇರಿದಂತೆ 30ಕ್ಕೂ ಹೆಚ್ಚು ವಸ್ತುಗಳನ್ನು ಫೊರೆನ್ಸಿಕ್ ಪರಿಶೀಲನೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಈ ವಸ್ತುಗಳ ವಿಶ್ಲೇಷಣೆಯಿಂದ ಹೆಚ್ಚಿನ ವಿವರಗಳು ಹೊರಬರುವ ಸಾಧ್ಯತೆ ಇದೆ.
ಅಂತಿಮ ವರದಿ ಸಲ್ಲಿಸಲು ಸಿದ್ಧತೆ – CJ Roy
ಮುಂದಿನ ವಾರದೊಳಗೆ ಫೊರೆನ್ಸಿಕ್ ವರದಿ ಎಸ್ಐಟಿ ಅಧಿಕಾರಿಗಳ ಕೈ ಸೇರಲಿದ್ದು, ಅದರ ಆಧಾರದ ಮೇಲೆ ಅಂತಿಮ ವರದಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಸಂಪೂರ್ಣ ನಿಜಾಂಶಗಳು ವರದಿ ನಂತರ ಸ್ಪಷ್ಟವಾಗುವ ನಿರೀಕ್ಷೆಯಿದೆ.

ಇದನ್ನು ನೋಡಿ : ಮಣ್ಣು ತುಂಬಿದ ಬುಟ್ಟಿಯನ್ನ ಸಿದ್ದು- ಡಿಕೆಶಿ ಹೆಂಗೆ ಹೊತ್ತಿಕೊಂಡ್ರು ನೋಡಿ




