ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ Toxic ಹೊಸ ಬೆಳವಣಿಗೆಯಿಂದ ಮತ್ತೆ ಗಮನ ಸೆಳೆದಿದೆ.

ಯಶ್ ನಟನೆಯ ದಿ ಮೋಸ್ಟ್ ಎಕ್ಸ್ಪೆಟೆಡ್ ಮೂವಿ ಅಂದ್ರೆ ʼಟಾಕ್ಸಿಕ್ʼ. ಈ ಚಿತ್ರದ ಮ್ಯೂಸಿಕ್ ರೈಟ್ಸ್ ಸೇಲ್ ಆಗಿದೆ. ಬಂಪರ್ ಹಣವನ್ನ ಕೊಟ್ಟು ಈ ಚಿತ್ರದ ಸಂಗೀತದ ಹಕ್ಕುಗಳನ್ನ ಇದೀಗ ಜೀ ಮ್ಯೂಸಿಕ್ ತೆಗೆದುಕೊಂಡಿದೆ.

ಎಲ್ಲದಕ್ಕೂ ಬ್ರೇಕ್
ಜೀ ಮ್ಯೂಸಿಕ್ ಸಂಸ್ಥೆ ಟಾಕ್ಸಿಕ್ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿದೆ. ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವುದು ಗೊತ್ತೆಯಿದೆ. ಆದರೆ ರವಿ ಜೊತೆಗೆ ಇನ್ನು 4 ಜನ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುವುದು ವಿಶೇಷ.
ಈ ಬಗ್ಗೆ ಅದೀಕೃತವಾಗಿ ಚಿತ್ರತಂಡದಿಂದ ಮಾಹಿತಿ ಲಭ್ಯವಾಗಿದೆ. ಟಾಕ್ಸಿಕ್ ಚಿತ್ರಕ್ಕೆ ಯಾರು ಸಂಗೀತ ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಇನ್ನು ಈ ಚಿತ್ರದ ವಿಭಿನ್ನ ಶೈಲಿಯ ಸಂಗೀತವು ಸಮ್ಮಿಲನಕ್ಕೆ ಸಾಕ್ಷಿಯಾಗಿದೆ.
ಇದನ್ನು ಓದಿ : ರೈಲು ಹಳಿಯ ಮೇಲೆ ವೃದ್ದ ದಂಪತಿಯ ಶವ ಪತ್ತೆ

ಚಿತ್ರದ ಮೇಲೆ ಹೆಮ್ಮೆ ಇದೆ
ಯಶ್ ಸಿನಿಮಾದ Toxic ಚಿತ್ರ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾದ ಆತ್ಮವನ್ನ ಪ್ರತಿನಿಧಿಸುತ್ತಿದೆ. ಭಾಷೆ ಮತ್ತು ಪ್ರದೇಶಗಳ ಗಡಿಗಳನ್ನ ಮೀರುವ ಕಥೆ ಮತ್ತು ದೃಷ್ಟಿಕೋನ ಹೊಂದಿದೆ. ಹಿಂದಿ, ಕನ್ನಡ, ತೆಲುಗು,ತಮಿಳು, ಮಲಯಾಳಂ, ಸೇರಿ ಎಲ್ಲಾ ಭಾಷೆಗಳಲ್ಲಿ ಒಂದೇ ವೇದಿಕೆಯಲ್ಲಿ ಸಂಗೀತವನ್ನು ಬಿಡುಗಡೆ ಮಾಡುವ ಹೆಮ್ಮೆ ನಮಗೆ ಇದೆ ಎಂದು ಜೀ ಮ್ಯೂಸಿಕ್ ಕಂಪನಿಯ ಸಜಲ್ ಪಾರೇಖ್ ತಿಳಿಸಿದ್ದಾರೆ.

ಇದನ್ನು ನೋಡಿ : ತಿಪಟೂರಿನಲ್ಲಿ ಯಾವಾಗ ಜನರೊಂದಿಗೆ ಜನತಾದಳ ಕಾರ್ಯಕ್ರಮ..?




