Hassan ನಗರದ ಕರಿಗೌಡ ಕಾಲೋನಿಯಲ್ಲಿ ಮನಕಲಕುವ ಘಟನೆ ನಡೆದಿದೆ.

Hassan ನಗರದ ಎನ್ಡಿಆರ್ಕೆ ಶಿಕ್ಷಣ ಸಂಸ್ಥೆ ಎದುರಿನ ರೈಲು ಹಳಿಯಲ್ಲಿ ವೃದ್ದ ದಂಪತಿಯ ಶವ ಪತ್ತೆಯಾಗಿದ್ದು, ರೈಲು ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವೃದ್ದ ದಂಪತಿ ರಾತ್ರಿ ವೇಳೆ ಹಳಿಯ ಮೇಲೆ ತೆರಳಿ, ರೈಲು ಬರುವವರೆಗೂ ಹಳಿಯ ಮೇಲೆಯೇ ಕಾದಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ : ಶೀಘ್ರದಲ್ಲೇ Metro ಹೊಸ ದರ ನಿಗದಿ ಸಾಧ್ಯತೆ

ಪೊಲೀಸರು ಭೇಟಿ ನೀಡಿ ಪರಿಶೀಲನೆ
ಬೆಳಗಿನ ಜಾವ ರೈಲು ಸಂಚಾರದ ವೇಳೆ ಈ ದಾರುಣ ದೃಶ್ಯ ಕಂಡು ಬಂದಿದ್ದು, ಕೂಡಲೇ ಸ್ಥಳೀಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಷಯ ತಿಳಿದು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷಗೆ ರವಾನಿಸಿದ್ದಾರೆ.
ಮೃತರ ಗುರುತು ಪತ್ತೆಗಾಗಿ ತನಿಖೆ – Hassan
ಸದ್ಯ ಮೃತ ದಂಪತಿಯ ಗುರುತು ಪತ್ತೆಯಾಗಿಲ್ಲ, ಮೃತರ ಬಳಿ ಯಾವುದೇ ಗುರುತಿನ ಚೀಟಿಯಾಗಲಿ ದಾಖಲೆಯಾಗಲಿ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಮೃತರ ಗುರುತು ಪತ್ತೆಗಾಗಿ ವಿವಿಧ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಇದನ್ನು ನೋಡಿ : ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಜೋಡಿ ಮೇಲೆ ದರ್ಪ – ತುಮಕೂರಿನಲ್ಲಿ ನಿಲ್ಲುತ್ತಿಲ್ಲ ಅಸ್ಪೃಶ್ಯತೆ ಪದ್ಧತಿ




