Namma Metro ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ, ಈಗ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ.

ಬೆಂಗಳೂರು ನಗರದ Namma Metro ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದರೂ, ಇದೀಗ ಮತ್ತೆ ದರ ಹೆಚ್ಚಳದ ವಿಚಾರ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗೋದು ಬಹುತೇಕ ನಿಶ್ಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.
5% ದರ ಏರಿಕೆಗೆ ತಾತ್ಕಾಲಿಕ ತಡೆ
ಕಳೆದ ಬಾರಿ 5% ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಈ ಹಿನ್ನೆಲೆ ಉಪ ಮುಖ್ಯಮಂತ್ರಿ D. K. Shivakumar ಅವರು ಮೆಟ್ರೋ ಖರ್ಚು-ವೆಚ್ಚಗಳ ಬಗ್ಗೆ ಸಂಪೂರ್ಣ ಆಡಿಟ್ ನಡೆಸುವಂತೆ ಸೂಚಿಸಿದ್ದರು.

ಇದನ್ನು ಓದಿ : ಹೃದಯಾಘಾತದಿಂದ 9 ನೇ ತರಗತಿ ವಿದ್ಯಾರ್ಥಿ ದಾರುಣ ಸಾವು
ಆಡಿಟ್ ಪೂರ್ಣ – ಮುಂದೇನು?
BMRCL ಆಂತರಿಕ ಆಡಿಟ್ ಪೂರ್ಣಗೊಳಿಸಿದ್ದು, ಮೆಟ್ರೋ ನಿರ್ವಹಣೆ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಸೇರಿದಂತೆ ಎಲ್ಲಾ ಖರ್ಚುಗಳ ವಿಶ್ಲೇಷಣೆ ಮಾಡಲಾಗಿದೆ. ಇದೀಗ ಈ ವರದಿಯನ್ನು ಡಿಸಿಎಂ ಅವರ ಗಮನಕ್ಕೆ ತರಲು ಸಂಸ್ಥೆ ಮುಂದಾಗಿದೆ.
ಆಡಿಟ್ ಮುಗಿದ ಹಿನ್ನೆಲೆ ದರ ಏರಿಕೆ ಚರ್ಚೆ ಮತ್ತೆ ಜೋರಾಗಿದೆ. ನಿಗದಿಯಾಗಿದ್ದ 5% ದರದಲ್ಲಿ ಬದಲಾವಣೆ ಆಗಬಹುದೇ ಎಂಬುದರ ಬಗ್ಗೆ ವಿವಿಧ ಊಹಾಪೋಹಗಳು ನಡೆಯುತ್ತಿವೆ.
ಕೆಲವರು 1% ಅಥವಾ 2% ಮಟ್ಟಿಗೆ ದರ ನಿಗದಿ ಮಾಡಬಹುದು ಎಂದು ಹೇಳುತ್ತಿದ್ದು, ಇನ್ನೂ ಕೆಲವರು ಅದಕ್ಕಿಂತ ಹೆಚ್ಚು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಹೊಸ ದರ ನಿಗದಿ ಸಮಿತಿ ಅಗತ್ಯ
ದರ ಇಳಿಕೆ ಅಥವಾ ಏರಿಕೆ ಮಾಡಲು ಹೊಸ ದರ ನಿಗದಿ ಸಮಿತಿ ರಚನೆ ಅಗತ್ಯವಿದೆ. ಆಡಿಟ್ ಪೂರ್ಣಗೊಂಡಿರುವ ಹಿನ್ನೆಲೆ ಮೆಟ್ರೋ ಬೋರ್ಡ್ ಸಭೆ ಕರೆಯುವ ಕುರಿತು ಬಿಎಂಆರ್ಸಿಎಲ್ ಎಂಡಿ ಅವರು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಸಿದ್ಧರಾಗಿದ್ದಾರೆ.
ಇನ್ನು ಬೋರ್ಡ್ ಸಭೆಯ ಬಳಿಕ ದರ ಏರಿಕೆ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬರುವ ಸಾಧ್ಯತೆ ಇದೆ.
ಇದನ್ನು ನೋಡಿ : TUMAKURU | ಆ ಗ್ರಾಮಕ್ಕೆ ಹೋಗಲು ರಸ್ತೆಯೇ ಇಲ್ಲ ರಸ್ತೆಗೆ ಜಾಗ ಬಿಡಲು ಒಪ್ಪದ ಮಾಲೀಕ




