9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ Davanagere ಯಲ್ಲಿ ನಡೆದಿದೆ.

9ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ಇಂದು Davanagere ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ
ಚಮನ್ ಸಾಬ್ ಮತ್ತು ಫಾತಿಮಾ ದಂಪತಿಯ ಮೂರು ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿದ್ದ ಮುಝಮ್ಮಿಲ್ ಎಂಬಾತ ಮೃತ ಬಾಲಕ. ಈತ ತಾಲೂಕಿನ ಹನುಮಂತಪುರ ಗ್ರಾಮದ ರಾಜೀವ್ ಗಾಂಧಿ ವಸತಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಇಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮುಝಮ್ಮಿಲ್ ಮೂತ್ರ ವಿಸರ್ಜನೆಗಾಗಿ ಎದ್ದು ಹೊರಗೆ ಹೋಗಿ, ಬಳಿಕ ಮನೆ ಒಳಗೆ ಬಂದು ಹಠಾತ್ ಕುಸಿದು ಬಿದ್ದಿದ್ದಾನೆ. ತಕ್ಷಣ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.
ಇದನ್ನು ಓದಿ : Bengaluru|ಸ್ನೇಹಮಯಿ ಕೃಷ್ಣ ಮೇಲೆ ಮತ್ತೊಬ್ಬ ಮಹಿಳೆ ದೂರು

ವಿದ್ಯಾರ್ಥಿ ದಾರುಣ ಸಾವು – Davanagere
ಮುಝಮ್ಮಿಲ್ ಕಲಿಯುತ್ತಿದ್ದ ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಸೇರಿದಂತೆ ರಾಜೀವ್ ಗಾಂಧಿ ವಸತಿ ಪ್ರೌಢಶಾಲೆಯ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಗೋಗುದ್ದು ಗ್ರಾಮದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : ಆಕಸ್ಮಿಕ ಬೆಂಕಿಗೆ ತೆಂಗಿನ ಮರಗಳು ಸುಟ್ಟು ಭಸ್ಮ- ಬೆಳೆ ಕಳೆದುಕೊಂಡು ಅನ್ನದಾತ ಕಂಗಾಲು




