ರಾಕಿ ‘ಭಾಯ್’ ಗೆಟಪ್ ಕಳಚಿ ‘ರಾಯ್’ ಅವತಾರ – Yash ಗಡ್ಡಕ್ಕೆ ಕತ್ತರಿ ಹಾಕಿದ್ದೇಗೆ..? ವಿಡಿಯೋ.

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ Toxic ಮೂಲಕ ಯಶ್ ಅವರು ಮತ್ತೆ ಭರ್ಜರಿಯಾಗಿ ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದು, ವಿಶೇಷವಾಗಿ ಯಶ್ ಅವರ ಎರಡು ವಿಭಿನ್ನ ಲುಕ್ಗಳು ಕಾಣಿಸಿಕೊಂಡಿದ್ದಾರೆ.
AI ಎಂದವರಿಗೆ ಸಿಕ್ತು ಉತ್ತರ
ಈ ಸಿನಿಮಾದಲ್ಲಿ ಯಶ್ ಅವರು ‘ರಾಯ’ ಮತ್ತು ‘ಟಿಕೆಟ್’ ಎಂಬ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ‘ಟಿಕೆಟ್’ ಲುಕ್ನಲ್ಲಿ ಅವರು ತುಂಬಾ ಯಂಗ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಲುಕ್ AI ಮೂಲಕ ಮಾಡಲಾಗಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.
ಇದನ್ನು ಓದಿ : Tumakuru|ಮನಕಲಕುವ ಘಟನೆ – ಹುಟ್ಟಿದ ಐದೇ ದಿನಕ್ಕೆ ಅನಾಥವಾದ ಕಂದಮ್ಮ

ಎಐ ಅಲ್ಲ, ಮೇಕೋವರ್ ರಹಸ್ಯ ಬಹಿರಂಗ!
Yash ಅವರ ಮೇಕೋವರ್ ಎಐ ಮೂಲಕವಲ್ಲ, ಪ್ರೊಫೆಷನಲ್ ಸ್ಟೈಲಿಂಗ್ ಮೂಲಕ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ Alex Vijay Kanth ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯಶ್ ಅವರ ಸಂಪೂರ್ಣ ಮೇಕೋವರ್ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಹೇರ್ ಕಟ್, ಗಡ್ಡ ಟ್ರಿಮ್ ಮತ್ತು ಸ್ಟೈಲಿಂಗ್ ಮೂಲಕ ಯಶ್ ಅವರನ್ನು ಯಂಗ್ ಲುಕ್ಗೆ ತಂದು ನಿಲ್ಲಿಸಲಾಗಿದೆ.
ಏನೇ ಮಾಡಿದರೂ ಪರ್ಫೆಕ್ಟ್ – Yash
ಯಶ್ ಅವರು ಪರ್ಫೆಕ್ಷನಿಸ್ಟ್. ಏನೇ ಮಾಡಿದರೂ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಬಯಸುತ್ತಾರೆ. ‘ಕೆಜಿಎಫ್’, ‘ಕೆಜಿಎಫ್ 2’ ಚಿತ್ರಗಳಲ್ಲಿ ಇದು ಕಾಣಿಸಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಅವ ಜವಾಬ್ದಾರಿ ಹೆಚ್ಚಿದೆ. ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ಮಾಪಕರಲ್ಲಿ ಅವರೂ ಒಬ್ಬರು. ಹೀಗಾಗಿ, ಸಿನಿಮಾ ಮೇಕಿಂಗ್ ವಿಷಯದಲ್ಲಿ ಅವರೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ಬರೋ ಟಿಕೆಟ್ ಪಾತ್ರವನ್ನು ಅವರೇ ನಿಂತು ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ನೋಡಿ : ಹುಡುಗಿಯನ್ನು ಕೊಟ್ಟು ಮದುವೆ ಮಾಡಲಿಲ್ಲ ಅಪ್ರಾಪ್ತ ಬಾಲಕಿಯ ತಾಯಿಯ ಭೀಕರ ಹ*




