Tumakuru : ಪ್ಲಾಸ್ಟಿಕ್ ಬ್ಯಾಗ್ನಲ್ಲಿ ನವಜಾತ ಶಿಶು ಪತ್ತೆ- ರಸ್ತೆಯಲ್ಲೇ ಬಿಟ್ಟು ಹೋದಳಾ ಪಾಪಿ ತಾಯಿ?

ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರು ಇರುತ್ತಾರೆ. ಆದರೆ ಕೆಟ್ಟ ತಾಯಿಯನ್ನು ಎಂದಿಗೂ ಕಂಡಿರಲು ಸಾಧ್ಯವಿಲ್ಲ. ತನ್ನ ಪ್ರಾಣವನ್ನು ಪಣಕ್ಕಿಟ್ಟು ತನ್ನ ಮಗುವನ್ನು ಜೋಪಾನ ಮಾಡುವವಳು ತಾಯಿ. ಎಷ್ಟೇ ಕಷ್ಟ ಬಂದ್ರು ತನ್ನ ಮಗುವನ್ನು ಮಾತ್ರ ಜೋಪಾನ ಮಾಡುವವಳು ತಾಯಿಯೊಬ್ಬಳೇ. ತಾಯಿಯ ತ್ಯಾಗವನ್ನು ಎರಡಕ್ಷರದಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬ ಪಾಪಿ ತಾಯಿ ಐದು ದಿನದ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹೋಗಿರುವ ಘೋರ ಕೃತ್ಯ ಎಡಿಯೂರಿನ ದೇವಾಲಯ ಸಮೀಪ ನಡೆದಿದೆ.
ಬ್ಯಾಗ್ನಲ್ಲಿತ್ತು ಮಗು
ಹೌದು, Tumakuru ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನ ದೇವಸ್ಥಾನ ಸಮೀಪದ ರಸ್ತೆಯಲ್ಲಿ ಭಾನುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಪ್ಲಾಸ್ಟಿಕ್ ಬ್ಯಾಗ್ ಒಂದರಲ್ಲಿ ನವಜಾತ ಗಂಡು ಮಗು ಪತ್ತೆಯಾಗಿದೆ. ಮಗುವಿನ ಅಳುವಿನ ಶಬ್ದ ಕೇಳಿ ಆ ಮಾರ್ಗವಾಗಿ ತೆರಳುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ಒಳಗೆ ಕೇವಲ ಐದು ದಿನಗಳ ಮಗು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಇದನ್ನು ಓದಿ : ಓವರ್ಡೋಸ್ ಇಂಜೆಕ್ಷನ್ ಚುಚ್ಚಿಕೊಂಡು ವಿದ್ಯಾರ್ಥಿ Suicide.!
ಮಗುವನ್ನ ರಸ್ತೆಯಲ್ಲಿ ಬಿಟ್ಟು ಹೋದವರು ಯಾರು?
ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಮಗುವನ್ನು ಜಿಲ್ಲಾಸ್ಪತ್ರೆಯ ಸಖಿ ಕೇಂದ್ರಕ್ಕೆ ದಾಖಲಿಸಲಾಗಿದೆ. ವೈದ್ಯರು ಮಗುವಿನ ಆರೋಗ್ಯ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಾಯಿಯೇ ಮಗುವನ್ನ ಬಿಟ್ಟು ಹೋದಳಾ? – Tumakuru
ಪ್ರಾಥಮಿಕ ಮಾಹಿತಿ ಪ್ರಕಾರ, ತಾಯಿಯೇ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೋಷಕರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಇದನ್ನು ನೋಡಿ : GUBBI | CANCER ಪೀಡಿತ ಕರುಳ ಹಿಂಡುವ ಪುಟ್ಟ ಕಂದಮ್ಮನ ಕಣ್ಣೀರಿನ ಕಥೆ.!




