Kunigal : ಸಾಲಬಾಧೆ ತಾಳಲಾರದೇ ರೈ ಆತ್ಮಹತ್ಯೆ

ಸಾಲದ ಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ತಾಲೂಕಿನ ಮನವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ವೆಂಕಟೇಶ್ ಅಲಿಯಾಸ್ ರಾಜಣ್ಣ ಎಂದು ಗುರುತಿಸಲಾಗಿದೆ.
6 ಲಕ್ಷಕ್ಕೂ ಹೆಚ್ಚು ಸಾಲ
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕುಂಬಳ ಹಾಗೂ ಮುಂಗಾರು ಬೆಳೆ ಸಂಪೂರ್ಣ ಒಣಗಿದ್ದು, ರೈತ ವೆಂಕಟೇಶ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರ ಜೊತೆಗೆ 2 ಬೋರ್ ಫೇಲ್ ಆದಕಾರಣ ಕೃಷಿಗೆ ಮತ್ತಷ್ಟು ಹೊಡೆತ ಬಿದ್ದಿತ್ತು. ಇನ್ನು ಕೃಷಿಗಾಗಿ 6 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನು ಓದಿ : ಸಾಲಬಾಧೆ ತಾಳಲಾರದೇ ಯುವ ರೈತ ಆತ್ಯಹತ್ಯೆ!

Kunigal ರೈತ ಚಿಕಿತ್ಸೆ ಫಲಿಸದೇ ಸಾವು
ಇನ್ನು ಸಾಲಬಾಧೆ ತಾಳಲಾರದೆ ವೆಂಕಟೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನು ನೋಡಿ : ಚಿನ್ನ ಕದ್ದು ತಗ್ಲಾಕೊಂಡ SHORT MOVIE ನಟ – ಕ್ಯಾಮೆರಾ ಮುಂದೆ ನಟ, ಕ್ಯಾಮೆರಾ ಹಿಂದೆ ಕಳ್ಳ





