Bagalkote : ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ – ಪೊಲೀಸರ ಮೇಲೂ ಬಿತ್ತು ಕಲ್ಲು.

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಘಟನೆ Bagalkote ಯ ಕಿಲ್ಲಾ ಓಣಿಯಲ್ಲಿ ನಡೆದಿದೆ. ಇನ್ನು ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೆರವಣಿಗೆ ಮಸೀದಿ ಬಳಿ ಬಂದಾಗ ಎರಡು ಕಲ್ಲುಗಳು ಮತ್ತು ಒಂದು ಚಪ್ಪಲಿ ತೂರಲಾಗಿದೆ.

ಮಸೀದಿ ಬಳಿ ಘಟನೆ
ಮಸೀದಿಯೊಳಗಿದ್ದತಂಜೀರ್ ಎಂಬಾತ ಕಲ್ಲು ತೂರಾಟ ನಡೆಸಿದ್ದಾನೆ. ಪ್ಲಾನ್ ಮಾಡಿ ತೂರಾಟ ಮಾಡಿಲ್ಲ ಅಂತ ಅವನು ಹೇಳಿದ್ದಾನೆ. ಆ ಕಲ್ಲು ನಮ್ಮ ಇಬ್ಬರು ಪಿಸಿಗಳಿಗೆ ಬಂದು ಬಿದ್ದಿದೆ ಗಲಾಟೆಯ ವೇಳೆ ನನಗೂ ಕಲ್ಲೇಟು ಬಿದ್ದಿದೆ. ಗಲಾಟೆಯಲ್ಲಿ ಎಂಟು ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಕೆಲವರು ಅಲ್ಲೇ ಉಳಿದಿದ್ದರು ಎಂದು SP ಸಿದ್ದಾರ್ಥ ಗೋಯಲ್ ನೀಡಿದರು.
ಇದನ್ನು ಓದಿ : ಕರ್ನಾಟಕದ ಇನ್ನೊಬ್ಬ ಯುವಕ Ireland ನಲ್ಲಿ ನಿಗೂಢ ಸಾವು

ಹೆಚ್ಚುವರಿ ಭದ್ರತೆ – Bagalkote
ಘಟನೆಯ ನಂತರ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಿಸಿಟಿವಿ ಮತ್ತು ಸಾರ್ವಜನಿಕರು ಚಿತ್ರೀಕರಿಸಿದ ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : ಆಸ್ತಿಗಾಗಿ ಬರ್ಬರವಾಗಿ ಕೊಂದು ಪೆಟ್ರೋಲ್ ಹಾಕಿ ಸುಟ್ಟು ಹಾಕಿ ಅಟ್ಟಹಾಸ




