ಸಾಕೇತ್ ಶ್ರೀನಿವಾಸಯ್ಯ ಸಾವಿನ ಬಳಿಕ ಮತ್ತೋರ್ವ ಕನ್ನಡಿಗ Ireland ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಾಕೇತ್ ಶ್ರೀನಿವಾಸಯ್ಯ ಸಾವಿನ ಬಳಿಕ ಮತ್ತೋರ್ವ ಕನ್ನಡಿಗ ವಿದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ (31) ಅವರ ಮೃತದೇಹ Ireland ನ ಡಬ್ಲಿನ್ನ ನಗರದ ಫಿಂಗ್ಲಾಸ್ನ ಚಾರ್ಲ್ಸ್ ಟೌನ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ.
28 ದಿನಗಳ ಹಿಂದಷ್ಟೇ ಐರ್ಲೆಂಡ್ಗೆ ಪ್ರಯಾಣ
ಉದ್ಯೋಗದ ನಿಮಿತ್ತ ಇತ್ತೀಚೆಗೆ ಐರ್ಲೆಂಡ್ಗೆ ತೆರಳಿದ್ದ ಸಾಂಜೋ, ಕೇವಲ 28 ದಿನಗಳ ಹಿಂದಷ್ಟೇ ಐರ್ಲೆಂಡ್ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಪತ್ನಿ ಲಿಷ್ಮಾ ಅವರೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನು ಓದಿ : `Toxic’ ನ ರಣರೋಚಕ ಟೀಸರ್ ರಿಲೀಸ್ – ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್
ಆತ್ಮಹತ್ಯೆ ಶಂಕೆ, ತನಿಖೆ ಆರಂಭ
ಪ್ರಾಥಮಿಕ ಮಾಹಿತಿಯ ಪ್ರಕಾರ ಸಾಂಜೋSuicide ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ ಸಾವಿನ ನಿಖರ ಕಾರಣ ತಿಳಿದುಬರಬೇಕಿರುವುದರಿಂದ ಐರಿಶ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.
ಪತ್ನಿ ಅಸ್ವಸ್ಥ
ಇನ್ನು ಪತಿಯ ಅಕಾಲಿಕ ಸಾವಿನಿಂದಲಿಷ್ಮಾ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ ಸಾಂಜೋ ಅವರ ಶವವನ್ನು ಕಡಬದಲ್ಲಿರುವ ಅವರ ಗ್ರಾಮಕ್ಕೆ ತರಲು ಕುಟುಂಬ ನಿರ್ಧರಿಸಿದೆ.

ಇದನ್ನು ನೋಡಿ : ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರದಾಟ- ಸೇವೆ ಸಿಗದೇ ಕಂಗಾಲಾದ್ರು




