ಯಶ್ ಅಭಿನಯದ Toxic ಟೀಸರ್ ರಿಲೀಸ್ ‘ರಾಯ’ನ ಅವತಾರಕ್ಕೆ ಕಳೆದುಹೋದ ಫ್ಯಾನ್ಸ್.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಇಂದು ಬೆಳಗ್ಗೆ 9:35ಕ್ಕೆ ‘ಟಾಕ್ಸಿಕ್’ ಸಿನಿಮಾದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ Trend ಆಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರುತ್ತದೆ ಎಂಬ ಸುದ್ದಿಗಳ ನಡುವೆ ಚಿತ್ರತಂಡ ದಿಢೀರ್ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.

ಟೀಸರ್ ಹೈಲೈಟ್ಸ್
ಈ ಹಿಂದೆ ಬಿಡುಗಡೆಯಾಗಿದ್ದ ಗ್ಲಿಂಪ್ಸ್ನ ಹಸಿಬಿಸಿ ದೃಶ್ಯಗಳು ಮತ್ತು ಗುಂಡಿನ ಸದ್ದು ಈ ಟೀಸರ್ನಲ್ಲೂ ಮುಂದುವರಿದಿವೆ. ಸಿನಿಮಾ ಎಷ್ಟು Toxic ಆಗಿರಬಹುದು ಎಂಬುದಕ್ಕೆ ಟೀಸರ್ ಸ್ಪಷ್ಟ ಸುಳಿವು ನೀಡಿದೆ. ಯಶ್ ಅವರ ‘ರಾಯ’ ಲುಕ್, ಸ್ಟೈಲ್ ಮತ್ತು ಸ್ವ್ಯಾಗ್ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ.
ಇದನ್ನು ಓದಿ : ರೈತರಿಗೆ ಹೆಣ್ಣು ಕೊಡುವವರೇ ಇಲ್ಲ..! ಪತ್ರ ಬರೆದು ಗಮನ ಸೆಳೆದ ಶಾಸಕ Ranganath

ಪಾತ್ರ ಪರಿಚಯ
ಟೀಸರ್ ಮೂಲಕ ಪ್ರಮುಖ ಪಾತ್ರಧಾರಿಗಳ ಪರಿಚಯವೂ ನಡೆದಿದೆ. ನಟಿಯರ ದಂಡೇ ಇರುವ ಈ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಶೇಡ್ಗಳ ಪಾತ್ರಗಳಿವೆ.
- Yash – ರಾಯ (Raya)
- Nayanthara – ಗಂಗಾ (ಮಾಸ್ ಮತ್ತು ಡಾನ್ ಲುಕ್ನಲ್ಲಿ ಎಂಟ್ರಿ)
- Kiara Advani – ನಾದಿಯಾ (Nadia)
- Huma Qureshi – ಎಲಿಜಬೆತ್
- Rukmini Vasanth – ಮೆಲಿಸಾ
- Tara Sutaria – ರೆಬೆಕಾ
- Natalie Burn – ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಬೋಲ್ಡ್ ದೃಶ್ಯಗಳ ಚರ್ಚೆ
ಈ ಹಿಂದೆ ರಾಯನ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾಗಿದ್ದಾಗ ಕೆಲವು ಬೋಲ್ಡ್ ದೃಶ್ಯಗಳು ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದವು. ಕೆಲವರು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇಂದಿನ ಟೀಸರ್ನಲ್ಲಿ ನಿರ್ದೇಶಕಿ Geetu Mohandas ಕಥೆಯ ಗಂಭೀರತೆಯನ್ನು ಮತ್ತು ಪಾತ್ರಗಳ ತೂಕವನ್ನು ತೋರಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಲು ಪ್ರಯತ್ನಿಸಿರುವುದು ಗೋಚರಿಸಿದೆ.

ಮುಂದೇನು?
ಟೀಸರ್ ಮೂಲಕ ಪ್ರಚಾರದ ಕಾವು ಏರಿಸಿರುವ ಚಿತ್ರತಂಡ, ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಸಜ್ಜಾಗಿದೆ. KGF ನಂತರ ಯಶ್ ನಟನೆಯ ಈ ಸಿನಿಮಾ ಭಾರೀ ಮಟ್ಟದಲ್ಲಿ ಸಂಚಲನ ಸೃಷ್ಟಿಸಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಜೋರಾಗಿದೆ.
ಇದನ್ನು ನೋಡಿ : ಅಬ್ಬಬ್ಬಾ.. ಇವನೆಂಥಾ ಭಯಾನಕ ಕಳ್ಳ!ಅಜ್ಜಿ ಬಿದ್ದು ಒದ್ದಾಡಿದ್ರು ಸರ ಕದ್ದೊಯ್ದ




