Bengaluru : ವಾಶ್ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್; ನಂತರ ಆಗಿದ್ದೇನು?

Bengaluru : ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ನಟಿಗೆ ‘ವಾಶ್ರೂಮ್ ವಿಡಿಯೋ’ ಕಂಟಕ
ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಕ್ರಿಕೆಟ್ ಟೂರ್ನಿ ನಡೆದಿತ್ತು. ಟೂರ್ನಿಯ ಎರಡನೇ ದಿನ ವಾಶ್ ರೂಂ ಹೋದಾಗ ಎದುರಾದ ಅಪರಿಚಿತ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದ ಮತ್ತು ಫೊಟೋ ತೆಗೆದಿದ್ದ.ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದಿಂದಲೇ ಫೊಟೋ ವಿಡೀಯೋ ರೆಕಾರ್ಡ್ ಮಾಡಿದ್ದ ಎಂಬ ಆರೋಪವನ್ನು ಮಾಡಲಾಗಿದೆ.

ಇದನ್ನು ಓದಿ : ಹಲವು ಕೋರ್ಟ್ಗಳಿಗೆ Bomb Threat – ಬಾಂಬ್ ಸ್ಫೋಟಿಸುವುದಾಗಿ ಸಂದೇಶ
ಖಾಸಗಿ ವಿಡಿಯೋ ರೆಕಾರ್ಡ್
ಸಾಮಾನ್ಯವಾಗಿ ವಿಡಿಯೋ ಮಾಡಿದವರು ಅವರಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ವಿಡಿಯೋ ರೆಕಾರ್ಡ್ ಮಾಡಿ ಯುವತಿಗೆ ಕಳುಹಿಸಿದೆ ಆಕೆಯ ಆಪ್ತ ಸ್ನೇಹಿತೆಗೆ ಕಳುಹಿಸಿದ್ದ. ‘Swan.3704722’ ಇನ್ಸ್ಟಾ ಅಕೌಂಟ್ನಿಂದ ಸಂದೇಶ ಕಳುಹಿಸಲಾಗಿದೆ.
ಹಣಕ್ಕೆ ಡಿಮ್ಯಾಂಡ್ – Bengaluru
“ವಿಡಿಯೋ ವೈರಲ್ ಮಾಡಬಾರದೆಂದರೆ ಹಣ ಕೊಡಬೇಕು” ಎಂದು ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಯು ವಿಡಿಯೋ ಕಾಲ್ ಮೂಲಕವೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸೈಬರ್ ಕ್ರೈಂ ಪೊಲೀಸರಿಗೆ ದೂರು
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯು ಕಳುಹಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನು ನೋಡಿ : NATIONAL CRUSHಗೆ ಮದುವೆ ಸಂಭ್ರಮ ಯಾವಾಗ ಮದುವೆ.. ಹೇಗಿದೆ ಪ್ರಿಪರೇಷನ್




