ರಾಜ್ಯದ ಹಲವು ಕೋರ್ಟ್ಗಳಿಗೆ Bomb Threat – ಆತಂಕಕ್ಕೆ ಒಳಗಾದ ವಕೀಲರು ಹಾಗೂ ಸಿಬ್ಬಂದಿ.

ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಮುಂದುವರೆದಿದ್ದು, ಇಂದು ಮಡಿಕೇರಿ, ಧಾರವಾಡ, ದಾವಣಗೆರೆ ಕೋರ್ಟ್ಗಳಿಗೆ ಕಿಡಿಗೇಡಿಗಳು Bomb Threat ಹಾಕಿದ್ದು, ವಕೀಲರು ಹಾಗೂ ಸಿಬ್ಬಂದಿ ಕೆಲ ಕಾಲ ಆತಂಕಕ್ಕೆ ಒಳಗಾಗಿದ್ರು. ಹೌದು ರಾಜ್ಯದಲ್ಲಿ ನ್ಯಾಯಾಂಗ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಬಾಂಬ್ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶಗಳನ್ನು ರವಾನಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ನಾನಾಕೋರ್ಟ್ ಗಳಿಗೆಇ- ಮೇಲ್ ಮೂಲಕಬೆದರಿಕೆ
ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಬೆಳ್ಳಂಬೆಳ್ಳಗೆ ಕೋರ್ಟ್ಗೆ ಬಂದಿದ್ದ ವಕೀಲರು ಹಾಗೂ ಸಿಬ್ಬಂದಿ ವರ್ಗ ಆತಂಕಕ್ಕೆ ಒಳಗಾಗಿದ್ರು.
ಹಾಸನ ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ಅಪರಿಚಿತರಿಂದ ಬೆದರಿಕೆ ಸಂದೇಶ ಬಂದಿದಿದ್ದು, ಕೋರ್ಟ್ನಲ್ಲಿ ಇದ್ದ ವಕೀಲರು, ಸಿಬ್ಬಂದಿಯನ್ನು ಪೊಲಿಸರು ಹೊರಗೆ ಕಳಿಸಿ, ತೀವ್ರ ತಪಾಸಣೆ ನಡೆಸಿದ್ರು.
ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ
ನ್ಯಾಯಾಲಯದ ಪ್ರವೇಶ ದ್ವಾರಗಳು, ಪಾರ್ಕಿಂಗ್ ಪ್ರದೇಶ, ನ್ಯಾಯಾಧೀಶರ ಕಚೇರಿಗಳು, ನ್ಯಾಯಾಲಯದ ಒಳಭಾಗ, ದಾಖಲೆ ಕೊಠಡಿಗಳು ಸೇರಿದಂತೆ ಇಂಚಿಂಚೂ ಜಾಗ ಬಿಡದೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ತಪಾಸಣೆ ನಡೆಸಿತು.
ಅಲ್ದೇ ಭದ್ರತಾ ದೃಷ್ಟಿಯಿಂದ ನ್ಯಾಯಾಲಯ ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯ್ತು. ಅಲ್ದೇ ಕೋರ್ಟ್ ಆವರಣದೊಳಗೆ ಪ್ರವೇಶಿಸುವವರನ್ನು ಪರಶೀಲನೆ ನಡೆಸಿ ಒಳಗೆ ಬಿಡಲಾಯ್ತು.

ಇದನ್ನು ಓದಿ : Darshan ಬರ್ತ್ಡೇ ಸೆಲೆಬ್ರೇಶನ್ಗೆ ಮುಗಿಬಿದ್ದ ಫ್ಯಾನ್ಸ್ – ಹೈಡ್ರಾಮಾ ಮಾಡಿದವನಿಗೆ ಕಪಾಳಮೋಕ್ಷ!
ಹಾವೇರಿಯ ಜಿಲ್ಲಾ ನ್ಯಾಯಾಲಯಕ್ಕೂBomb Threat
ಇತ್ತ ಹಾವೇರಿಯ ಜಿಲ್ಲಾ ನ್ಯಾಯಾಲಯಕ್ಕೂ ಕೂಡ ಬಾಂಬ್ ಬೆದರಿಕೆ ಹಾಕಲಾಗಿದ್ದು, ಕೂಡಲೇ ಪೊಲೀಸರು ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ತೀವ್ರ ತಪಾಸಣೆ ನಡೆಸಲಾಯ್ತು. ಅಲ್ದೇ ಇಂದಿನ ಎಲ್ಲಾ ಕಲಾಪಗಳನ್ನು ಮೊಟಕುಗೊಳಿಸಲಾಯ್ತು.
ಬಾಂಬ್ ನಿಷ್ಕ್ರಿಯ, ಶ್ವಾನದಳದಿಂದತೀವ್ರ ತಪಾಸಣೆ
ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ, ಧಾರವಾಡ , ದಾವಣಗೆರೆ ಸೇರಿ ಹಲವು ಜಿಲ್ಲೆಗಳಿಗೆ ಒಂದೇ ಸಲ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಆತಂಕ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿದ್ದು, ಬಹುತೇಕ ಹುಸಿ ಬೆದರಿಕೆಗಳಾಗಿದ್ದರೂ, ಭದ್ರತಾ ದೃಷ್ಟಿಯಿಂದ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಅಲ್ದೇ ಕೃತ್ಯಗಳಿಗೆ ಕಾರಣವಾಗಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ವಕೀಲರ ಸಂಘಗಳು ಆಗ್ರಹಿಸುತ್ತಿವೆ.

ಇದನ್ನು ನೋಡಿ : ತುಮಕೂರಿನಲ್ಲಿ HDK ಮಿಂಚಿನ ಸಂಚಾರ ಕಾಂಗ್ರೆಸ್ ವಿರುದ್ಧ ಕುಮಾರಣ್ಣ ಹೀಗ್ಯಾಕಂದ್ರು




