ಇಂದು Darshan ಹುಟ್ಟುಹಬ್ಬದ ಸಂಭ್ರಮ – ದಚ್ಚು ಬರ್ತಡೇ ಸೆಲೆಬ್ರೇಷನ್ಗೆ ಮುಗಿಬಿದ್ದ ಫ್ಯಾನ್ಸ್.

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಆದ್ರೆ ದುರಾದೃಷ್ಟವಶಾತ್ ದರ್ಶನ್ ಈಗ ಜೈಲುಪಾಲಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರೋ Darshan ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇನ್ನು ದರ್ಶನ್ ಹುಟ್ಟುಹಬ್ಬದಂದು ಆತ್ಮೀಯರು, ಅಭಿಮಾನಿಗಳು ದಚ್ಚು ಅವರನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಹುಚ್ಚಾಟ ಮೆರೆದ ಅಭಿಮಾನಿಗೆ ಕಪಾಳಮೋಕ್ಷ
ಇನ್ನು ನಟ ದರ್ಶನ್ ಜೈಲಿನಲ್ಲಿದ್ದರೂ ಅವರ ಮೇಲಿನ ಪ್ರೀತಿ ಮಾತ್ರ ಅಭಿಮಾನಿಗಳಲ್ಲಿ ಎಂದು ಕಡಿಮೆ ಆಗಿಲ್ಲ. ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ದರ್ಶನ್ ಅವರು ಮನೆಯಲ್ಲಿ ಇಲ್ಲದಿದ್ದರು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿ, ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದು ಭಾರೀ ಹೈಡ್ರಾಮವೇ ಸೃಷ್ಟಿಯಾಗಿದೆ.

ಇದನ್ನು ಓದಿ : ರೇಣುಕಾಸ್ವಾಮಿ ಕೊಲೆ ಪ್ರಕರಣ – Pavithra Gowdaಗೆ ಬಿಗ್ ಶಾಕ್
ದರ್ಶನ್ ಮನೆ ಮುಂದೆ ಹುಟ್ಟು ಹಬ್ಬ ಆಚರಣೆಗೆ ಅಭಿಮಾನಿಗಳು ಆಗಮಿಸಿದ್ದು, ಪೊಲೀಸರು ದರ್ಶನ್ ಮನೆಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಅಭಿಮಾನಿಗಳನ್ನು ತಡೆಯುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಅತಿರೇಕದ ವರ್ತನೆ ತೋರಿದ್ದು, ಆತನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರೋ ಪ್ರಸಂಗವೂ ನಡೆದಿದೆ.
ಸ್ಪೆಷಲ್ ಫೋಟೋವನ್ನು ಹಂಚಿಕೊಂಡು Darshan ಗೆ ವಿಶ್
ಇನ್ನು ನಟ ದರ್ಶನ್ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮಿ ಸ್ಪೆಷಲ್ ಫೋಟೋವನ್ನು ಹಂಚಿಕೊಂಡು ವಿಶ್ ಮಾಡಿದ್ದಾರೆ. ಅಲ್ದೇ ರಕ್ಷಿತಾ ಪ್ರೇಮ್, ಅನುಷಾ ರೈ, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ಧನ್ವೀರ್, ರಚಿತಾ ರಾಮ್ ಸೇರಿ ಹಲವಾರು ಮಂದಿ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.

ಇದನ್ನು ನೋಡಿ : TUMAKURU – LOVE DHOKA | ಜೀವನ ಕೊಡುತ್ತೇನೆಂದು ಬಂದ ಪ್ರಿಯಕರ ಲಕ್ಷ ಲಕ್ಷ ಹಣ ಪಡೆದು ಕೈ ಕೊಟ್ನಾ ಪಾಪಿ ?




