ಆರೋಪಿ Pavithra Gowda ಗೆ ಬಿಗ್ ಶಾಕ್.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರೋ ಡಿ ಗ್ಯಾಂಗ್ಗೆ ಮತ್ತೆ ಶಾಕ್ ಎದುರಾಗಿದೆ. ಒಂದ್ಕಡೆ ಇವತ್ತು ಡಿ ಬಾಸ್ ದರ್ಶನ್ ಹುಟ್ಟುಹಬ್ಬ ಇದ್ರೆ, ಇತ್ತ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.
ಆರೋಪಿ ಪವಿತ್ರಾ ಗೌಡಗೆ ಬಿಗ್ ಶಾಕ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರೋ ಪವಿತ್ರಾ ಗೌಡ, ತಮ್ಮ ಮಗಳಿಗೆ ಪರೀಕ್ಷೆ ಇದ್ದು, ಪರೀಕ್ಷಾ ಸಮಯದಲ್ಲಿ ಅವಳೊಂದಿಗೆ ಇರುವ ಸಲುವಾಗಿ 57ನೇ ಸೆಷನ್ಸ್ ಕೋರ್ಟ್ಗೆ ಜಾಮೀನು ಸಲ್ಲಿಸಿದ್ರು.
ಇದನ್ನು ಓದಿ : ತೋಟದಲ್ಲಿ ಹೋಗ್ತಿದ್ದ ಕಾರ್ಮಿಕನನ್ನು ಕೊಂದು ಹಾಕಿದ ಕಾಡಾನೆ

Pavithra Gowda ಗೆ ಜೈಲೇ ಗಟ್ಟಿ
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದು, ಪವಿತ್ರಾ ಗೌಡಗೆ ಜೈಲೇ ಗಟ್ಟಿಯಾಗಿದೆ. ಇತ್ತ ಇಂದು ಡಿ ಬಾಸ್ ದರ್ಶನ್ ಅವರ ಹುಟ್ಟುಹಬ್ಬ ಇದ್ದು, ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅನಿವಾರ್ಯತೆ ಇದೆ.

ಇದನ್ನು ನೋಡಿ : ಮಾದಪ್ಪನ ಸನ್ನಿಧಾನಕ್ಕೆ ಡಿಕೆಶಿ ಪತ್ನಿ ವಿಸಿಟ್ ವಿಶೇಷ ಪೂಜೆ ನೆರವೇರಿಸಿ ದರ್ಶನ ಪಡೆದ್ರು




