Haveri ಯಲ್ಲಿ ನಡೆದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಂಭ್ರಮಾಚರಣೆ…

Haveri : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳು ಪೂರ್ಣಗೊಂಡ ಹಿನ್ನೆಲೆ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನು ಭರ್ಜರಿಯಾಗಿ ಆಯೋಜಿಸಲಾಗಿದೆ. ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ ಬಳಿ ನಡೆದ ಈ ಬೃಹ ತ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ.

ರಾಜ್ಯದ 9 ಜಿಲ್ಲೆಗಳ ಸುಮಾರು 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ , ಸಿರಿ ಧಾನ್ಯಗಳ ನಾಮಫಲಕದ ಮೂಲಕ ಕಾರ್ಯಕ್ರಮ ಉದ್ಘಾಟನೆ , ಭೂ ಗ್ಯಾರಂಟಿ ಪುಸ್ತಕ ಬಿಡುಗಡೆ , ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ , ಉತ್ತಮ ಕೆಲಸ ಮಾಡಿದ ತಹಶೀಲ್ದಾರ್ಗಳಿಗೆ ಸನ್ಮಾನ , ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು.
ಇದನ್ನು ಓದಿ : ನನ್ನ ಮದುವೆ April 1ಕ್ಕೆ..! – ವದಂತಿಗಳಿಗೆ ತೆರೆ ಎಳೆದ Mrunal Thakur ..!!

ಸಿಎಂ ಪುತ್ಥಳಿ ಅನಾವರಣ
ಸಮಾವೇಶದ ವೇದಿಕೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ನಿಂತಿರುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಈ ಪುತ್ಥಳಿಯನ್ನು ಗೊಟಗೋಡಿ ರಾಕ್ ಗಾರ್ಡನ್ ಮುಖ್ಯಸ್ಥ ದಾಸನೂರ್ ಅವರು ಕೊಡುಗೆಯಾಗಿ ನೀಡಿದ್ದಾರೆ. ಪುತ್ಥಳಿ ಅನಾವರಣದ ವೇಳೆ ನಾಯಕರು ಸಂತಸ ವ್ಯಕ್ತಪಡಿಸಿದರು.

ಸಮಾವೇಶಕ್ಕೆ ಆಗಮಿಸಿದ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದೆ , ಸುಮಾರು 1.5 ಲಕ್ಷ ಜನರಿಗೆ ಆಹಾರ ವ್ಯವಸ್ಥೆ , 1000ಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ , 120 ಕೌಂಟರ್ಗಳ ಮೂಲಕ ಊಟ ವಿತರಣೆ , ಪಲಾವ್, ಮೊಸರನ್ನ, ಬೂಂದಿ ಲಾಡು, ಉಪ್ಪಿನಕಾಯಿ, ಮಜ್ಜಿಗೆ ಪ್ಯಾಕೇಟ್ , ಹುಬ್ಬಳ್ಳಿ ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ ತಂಡದಿಂದ ಊಟ ತಯಾರಿಸಲಾಗಿದೆ.
ಭದ್ರತಾ ಕ್ರಮಗಳು
ಕಾರ್ಯಕ್ರಮದ ಭದ್ರತೆಗೆ ಸುಮಾರು 3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ಸುಗಮವಾಗಿ ನಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇದನ್ನು ನೋಡಿ : ATM ನಲ್ಲಿ ಹಣ ದೋಚಲು ಕಳ್ಳರು ಮಾಡಿದ ಪ್ಲಾನ್ ಗೆ ಪೊಲೀಸರೇ ಶಾಕ್




