ಧನುಶ್ ಜೊತೆ ಮದುವೆ ವದಂತಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ನಟಿ Mrunal Thakur ಸ್ಪಷ್ಟನೆ ನೀಡಿದ್ದಾರೆ. AI ಫೋಟೋಗಳಿಂದ ವೈರಲ್ ಆದ ಗಾಸಿಪ್ಗೆ ಹಾಸ್ಯಮಯ ಉತ್ತರ ನೀಡಿದರೆ ಸುದ್ದಿಯನಾ ಸಂಪೂರ್ಣ ವಿವರ ಓದಿ…

ಇತ್ತೀಚೆಗೆ ನಟಿ Mrunal Thakur ಹಾಗೂ ಧನುಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಫೆಬ್ರವರಿ 14ರಂದು ಇವರ ವಿವಾಹ ನಡೆಯಲಿದೆ ಎಂಬ ವರದಿಗಳೂ ಹರಿದಾಡಿದ್ದವು. ಆದರೆ, ಇದೀಗ ನಟಿ ಸ್ವತಃ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

‘ಗಲಾಟಾ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಮೃಣಾಲ್ ಅವರಿಗೆ ಮದುವೆ ವಿಚಾರ ಕೇಳಿದಾಗ, ಅವರು ಹಾಸ್ಯಮಯ ಉತ್ತರ ನೀಡಿದರು.
“ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಅಲ್ಲ… ನನ್ನ ಮದುವೆ ನಡೆಯೋದು ಏಪ್ರಿಲ್ 1ರಂದು. ಏಕೆಂದರೆ ಅದು ಮೂರ್ಖರ ದಿನ!” ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿದರು.

ವದಂತಿಗಳಿಗೆ ಕಾರಣವಾದ AI ಫೋಟೋಗಳು
ಇತ್ತೀಚೆಗೆ ಮೃಣಾಲ್ ಮತ್ತು ಧನುಶ್ ಒಟ್ಟಿಗೆ ಕಾಣಿಸಿಕೊಂಡಿರುವ ಎಐ ಸೃಷ್ಟಿಯ ಫೋಟೋಗಳು ವೈರಲ್ ಆಗಿದ್ದವು. ಅನೇಕರು ಅದನ್ನು ನಿಜವೆಂದು ನಂಬಿದ್ದರಿಂದ ಮದುವೆ ಸುದ್ದಿಗಳು ವೇಗವಾಗಿ ಹರಡಿದವು. ಇದೇ ವದಂತಿಗಳಿಗೆ ಪ್ರಮುಖ ಕಾರಣವಾಯಿತು.
ಇದನ್ನು ಓದಿ : ಅಮೆರಿಕಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆ!

ಮೃಣಾಲ್ ಸ್ಪಷ್ಟಪಡಿಸಿದಂತೆ, ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ, ಸರಿಯಾದ ಸಮಯ ಮತ್ತು ಸರಿಯಾದ ವ್ಯಕ್ತಿ ಜೀವನಕ್ಕೆ ಬಂದಾಗ ಮಾತ್ರ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಾನೇ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಇದೀಗ ಮೃಣಾಲ್ ಅಭಿನಯದ ದೋ ದೀವಾನೆ ಶೆಹೆರ್ ಮೇ ಸಿನಿಮಾ ಫೆಬ್ರವರಿ 20ರಂದು ಬಿಡುಗಡೆಯಾಗುತ್ತಿದೆ. ನಟ ಸಿದ್ಧಾಂತ ಚತುರ್ವೇದಿ ಈ ಸಿನಿಮಾದ ಹೀರೋ ಆಗಿದ್ದಾರೆ. ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಮದುವೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಟಿ ತಿಳಿಸಿದ್ದಾರೆ.
ಇದನ್ನು ನೋಡಿ : ಹಿಟಾಚಿ ಕಂಪನಿಯಿಂದ ಇದೆಂಥಾ ನಿರ್ಲಕ್ಷ್ಯ.. 3 ದಿನಗಳಿಂದ ಪ್ರತಿಭಟಿಸಿದ್ರು ಡೋಂಟ್ ಕೇರ್




