ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ Rajasthan Royals ಫ್ರಾಂಚೈಸಿ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ.

IPL 2026 ಆರಂಭಕ್ಕೂ ಮುನ್ನವೇ Rajasthan Royals ಫ್ರಾಂಚೈಸಿ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ. ತಂಡದ ನಾಯಕತ್ವದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಯುವ ಆಲ್ರೌಂಡರ್ ರಿಯಾನ್ ಪರಾಗ್ (Riyan Parag) ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಜಡೇಜಾಗಿಲ್ಲ ಮಣೆ!
ತಂಡದಲ್ಲಿರುವ ಅನುಭವಿ ಆಟಗಾರ Ravindra Jadeja ಅವರ ಹೆಸರೂ ನಾಯಕತ್ವದ ಪಟ್ಟಿಗೆ ಕೇಳಿಬಂದಿತ್ತು. ಆದರೆ ಫ್ರಾಂಚೈಸಿ ಆಡಳಿತ ಮಂಡಳಿ ದೀರ್ಘಕಾಲದ ದೃಷ್ಟಿಯಿಂದ ಯುವ ಆಟಗಾರರ ಮೇಲೆ ವಿಶ್ವಾಸ ತೋರಿಸಿ ರಿಯಾನ್ ಪರಾಗ್ ಅವರಿಗೆ ಈ ಮಹತ್ವದ ಹೊಣೆಗಾರಿಕೆಯನ್ನು ಒಪ್ಪಿಸಿದೆ.
ಇದನ್ನು ಓದಿ : ಜಾತ್ರೆ ವೇಳೆ Male Mahadeshwara ಬೆಟ್ಟದಲ್ಲಿ ಭೀಕರ ಅಪಘಾತ..!!

Riyan Paragಗೆ ಒಲಿದ ನಾಯಕತ್ವ ಯಾಕೆ?
ರಿಯಾನ್ ಪರಾಗ್ ದೇಶೀಯ ಕ್ರಿಕೆಟ್ನಲ್ಲಿ ಅಸ್ಸಾಂ ತಂಡದ ನಾಯಕರಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಐಪಿಎಲ್ ಸೀಸನ್ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ತಂಡದ ದೀರ್ಘಕಾಲದ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಅಭಿಮಾನಿಗಳಿಗೆ ಶಾಕ್ & ಸರ್ಪ್ರೈಸ್
ಒಂದು ಕಾಲದಲ್ಲಿ ಟ್ರೋಲ್ಗಳಿಗೆ ಆಹಾರವಾಗಿದ್ದ ರಿಯಾನ್ ಪರಾಗ್, ಈಗ ಐಪಿಎಲ್ ತಂಡದ ನಾಯಕನಾಗಿ ಹೊರಹೊಮ್ಮಿರುವುದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಿರಿಯ ಆಟಗಾರರಾದ ಜಡೇಜಾ ಅವರ ಬೆಂಬಲದೊಂದಿಗೆ ಪರಾಗ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ‘ಯಂಗ್ಕ್ಯಾಪ್ಟನ್’ ನೇತೃತ್ವದಲ್ಲಿ ಕಪ್ ಗೆಲ್ಲುತ್ತಾ? ಎಂದು ಕಾದುನೋಡಬೇಕೆದೆ.
ಇದನ್ನು ನೋಡಿ : TUMAKURU| ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಮಗಳು




