
VAISHNAVI GOWDA : ಅಗ್ನಿಸಾಕ್ಷಿ ಹಾಗೂ ಸೀತಾ ರಾಮ ಧಾರಾವಾಹಿಗಳ ಮೂಲಕ ಮನೆಮಾತಾದ ನಟಿ ವೈಷ್ಣವಿ ಗೌಡ ಮದುವೆಯಾದ ಮೂರೇ ತಿಂಗಳಲ್ಲಿ ಪುನಃ ನಟನೆಗೆ ಭರ್ಜರಿ ರೀ ಎಂಟ್ರಿ ನೀಡಿದ್ದಾರೆ.
ಏಪ್ರಿಲ್ 14ರಂದು ಅದ್ಧೂರಿಯಾಗಿ ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಷ್ಣವಿ, ಜೂನ್ 4ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಕುಟುಂಬದವರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇದೀಗ ವೈಷ್ಣವಿ ಗೌಡ “ಮೈಕ್ರೋ ವೆಬ್ ಸಿರೀಸ್”ಮೂಲಕ ಸ್ಫೋಟಕ ಎಂಟ್ರಿ ನೀಡುತ್ತಿದ್ದಾರೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್ ಮೂಲಕ ಈ ವಿಷಯವನ್ನು ವೈಷ್ಣವಿ ಬಹಿರಂಗಪಡಿಸಿದ್ದು, ಇದು ಧಾರಾವಾಹಿಯೂ ಅಲ್ಲ. ಸಿನಿಮಾ ಕೂಡ ಅಲ್ಲ ಆದರೆ ಸದ್ಯದ ಟ್ರೆಂಡಿಂಗ್ ಮಾಧ್ಯಮವಾದ ವೆಬ್ ಸಿರೀಸ್ ಆಗಿದೆ.
ಈ ಹೊಸ ಪ್ರಾಜೆಕ್ಟ್ನಲ್ಲಿ ರಾಧಾ ರಮಣ ಧಾರಾವಾಹಿಯಿಂದ ಪ್ರಸಿದ್ಧಿ ಪಡೆದ ನಟ ಸ್ಕಂದ ಅಶೋ ಕ್ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ, ಅಗ್ನಿಸಾಕ್ಷಿಧಾರಾವಾಹಿಯಲ್ಲಿ ವೈಷ್ಣವಿಯ ಜೊತೆಗೆ ಕಾಣಿಸಿಕೊಂಡಿದ್ದ ಇಶಿತಾ ವರ್ಷಕೂಡ ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಳು ವರ್ಷಗಳ ನಂತರ ಇವರು ಪರದೆಯ ಮೇಲೆ ಮತ್ತೆ ಒಟ್ಟಿಗೆ ಬರುತ್ತಿದ್ದಾರೆ.
ಇನ್ನು ಈ ವೆಬ್ ಸಿರೀಸ್ನ್ನು ಖ್ಯಾತ ನಿರ್ದೇಶಕ ಪ್ರೀತಮ್ ಗುಬ್ಬಿಅವರ ತಂಡ ನಿರ್ವಹಿಸುತ್ತಿದ್ದು, ವೈಷ್ಣವಿ ಮೊದಲ ಬಾರಿಗೆ ತಾನೇ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಿರೀಸ್ ಯಾವ ಪ್ಲಾಟ್ ಫಾರ್ಮ್ನಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಬೇಕಿದೆ.




