Ind vs Usa : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಭಾರತ 29 ರನ್ಗಳ ಭರ್ಜರಿ ಜಯ ಸಾಧಿಸಿದೆ.

Ind vs Usa : ICC T20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭಾರತ 29 ರನ್ಗಳ ಭರ್ಜರಿ ಜಯ ಸಾಧಿಸಿತು.
ಯುಎಸ್ಎ ವಿರುದ್ಧ ಭಾರತಕ್ಕೆ 29 ರನ್ಗಳ ಗೆಲುವು
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ಗಳನ್ನು ಕಲೆಹಾಕಿತು.
49 ಬಾಲ್ಗಳಿಗೆ ಸೂರ್ಯಕುಮಾರ್ ಯಾದವ್ ಔಟಾಗದೇ 84 ರನ್ ಸಿಡಿಸಿದರು. ಪವರ್ಪ್ಲೇಯಲ್ಲೇ 4 ವಿಕೆಟ್ಗಳಿಗೆ 46 ರನ್ಗಳಿಗೆ ಕುಸಿದು ಆತಂಕ ಮೂಡಿಸಿತು.
ಇದನ್ನೂ ಓದಿ : Deadly Dogs ಹಾವಳಿ – 23ಕ್ಕೂ ಹೆಚ್ಚು ಜನರ ಮೇಲೆ ಅಟ್ಯಾಕ್

ಅಭಿಷೇಕ್ ಶರ್ಮಾ ಅಲಿ ಖಾನ್ಗೆ ಗೋಲ್ಡನ್ ಡಕ್ಗೆ ಬಿದ್ದರು. ಇಶಾನ್ ಕಿಶನ್ 20 ಹಾಗೂ ತಿಲಕ್ ವರ್ಮಾ 25 ರನ್ ಗಳಿಸಿ ನಿರ್ಗಮಿಸಿದರು. ಅಮೆರಿಕ ಪರ ವ್ಯಾನ್ ಶಾಲ್ಕ್ವಿಕ್ 25 ರನ್ಗಳಿಗೆ 4 ವಿಕೆಟ್ ಪಡೆದು ಗಮನ ಸೆಳೆದರು.
162 ರನ್ಗಳ ಗುರಿ ಬೆನ್ನತ್ತಿದ ಅಮೆರಿಕ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಆಂಡ್ರೀಸ್ ಗೌಸ್ 6, ಸಾಯಿತೇಜ ಮುಕ್ಕಮಲ್ಲ 2 ರನ್ ಗಳಿಸಿ ಔಟಾದರು. ನಾಯಕ ಮೊನಾಂಕ್ ಪಟೇಲ್ ಶೂನ್ಯಕ್ಕೆ ನಿರ್ಗಮಿಸಿದರು.
ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದ್ರೆ, ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರೆ, ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು. ಪರಿಣಾಮ ಅಮೆರಿಕ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.

MUST WATCH : ಅರಣ್ಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ




