Metro ದರ ನಾಳೆ ಏರಿಕೆಯಾಗುತ್ತಾ? ಯಥಾಸ್ಥಿತಿಯಲ್ಲಿ ಮುಂದುವರೆಯುತ್ತಾ ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ.

ನಮ್ಮ ಮೆಟ್ರೋ ಪ್ರಯಾಣ ದರ ನಾಳೆಯಿಂದ ಏರಿಕೆಯಾಗುತ್ತದೆಯೇ? ಅಥವಾ ಯಥಾಸ್ಥಿತಿಯಲ್ಲಿ ಮುಂದುವರೆಯುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಲಭ್ಯವಾಗಿಲ್ಲ.
ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ
ಶನಿವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ. ಸೋಮವಾರದಿಂದ ದರ ಏರಿಕೆ ಇರುವುದಿಲ್ಲ ಎಂದು ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ ಲಾಲ್ ಖಟ್ಟರ್ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು.

ಕೇಂದ್ರದಿಂದ ಪತ್ರ ಬಾರದೇ ಇದ್ದರೆ Metro ದರ ಏರಿಕೆ ಫಿಕ್ಸ್
ಆದರೆ, ಕೇಂದ್ರ ಸರ್ಕಾರ ತಡೆ ನೀಡಿದೆ ಎಂಬ ಹೇಳಿಕೆ ಇದ್ದರೂ ಇಲ್ಲಿಯವರೆಗೆ ಕೇಂದ್ರದಿಂದ ಬೆಂಗಳೂರು Metro ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಗೆ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಅಧಿಕೃತ ಆದೇಶದ ಪತ್ರ ಬಂದ ಬಳಿಕವೇ ದರ ಇಳಿಕೆ ಅಥವಾ ತಡೆ ಜಾರಿಗೆ ಬರಲಿದೆ. ಇದುವರೆಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲದಿದ್ದರೆ ನಿಗದಿಯಂತೆ ದರ ಏರಿಕೆ ಜಾರಿಯಾಗಲಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಒಂದು ವರ್ಷದ ಹಿಂದಷ್ಟೇ ಬಿಎಂಆರ್ಸಿಎಲ್ ಪ್ರಯಾಣ ದರವನ್ನು 71.5% ರಷ್ಟು ಹೆಚ್ಚಳ ಮಾಡಿತ್ತು. ಇದೀಗ ಮತ್ತೆ 5% ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಇದನ್ನು ಓದಿ : ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್ – 11 ತಿಂಗಳ ಮಗು ಬಿಟ್ಟು ಸೊಸೆ Suicide

ಕನಿಷ್ಠ 1 ರೂ., ಗರಿಷ್ಠ 5 ರೂ. ಏರಿಕೆ ಸಾಧ್ಯತೆ
2025ರಲ್ಲಿ ದರ ನಿಗದಿ ಸಮಿತಿ (Fare Fixation Committee – FFC) ಬಿಎಂಆರ್ಸಿಎಲ್ಗೆ ಪ್ರತಿ ವರ್ಷ 5% ರಷ್ಟು ದರ ಹೆಚ್ಚಳ ಮಾಡಲು ಶಿಫಾರಸು ಮಾಡಿತ್ತು. ಅದರಂತೆ ಕನಿಷ್ಠ 1 ರೂ. ಮತ್ತು ಗರಿಷ್ಠ 5 ರೂ. ದರ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಕನಿಷ್ಠ 10 ರೂ. ಇದ್ದ ದರ 11 ರೂ.ಗೆ, ಗರಿಷ್ಠ 90 ರೂ. ಇದ್ದ ದರ 95 ರೂ.ಗೆ ಏರಿಕೆಯಾಗಲಿದೆ.
ಹಿಂದಿನ ದರ ಏರಿಕೆ ವಿವಾದ
ಕಳೆದ ವರ್ಷ ದರ ನಿಗದಿ ಸಮಿತಿ 51.55% ರಷ್ಟು ದರ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದರೂ, ಬಿಎಂಆರ್ಸಿಎಲ್ 101.5% ರಷ್ಟು ದರ ಹೆಚ್ಚಳ ಮಾಡಿ 2025ರ ಫೆಬ್ರವರಿ 9ರಂದು ಜಾರಿಗೆ ತಂದಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಬಳಿಕ ದರವನ್ನು 30% ರಷ್ಟು ಇಳಿಸಲಾಗಿತ್ತು.
ಇದೀಗ ಮತ್ತೆ ದರ ಏರಿಕೆ ಕುರಿತ ಗೊಂದಲ ಮುಂದುವರಿದಿದ್ದು, ಕೇಂದ್ರದಿಂದ ಅಧಿಕೃತ ಆದೇಶ ಹೊರಬೀಳುವುದನ್ನು ಪ್ರಯಾಣಿಕರು ನಿರೀಕ್ಷಿಸುತ್ತಿದ್ದಾರೆ.

ಇದನ್ನು ನೋಡಿ : ಹೆಚ್ಚಾಗುತ್ತಿವೆ ಕೈ ಮುಖಂಡರ ಧಮ್ಕಿ ಕೇಸ್..ಧಮ್ಕಿ ಆಡಿಯೋ ವೈರಲ್ಗೆ ಆಕ್ರೋಶದ ಕಿಚ್ಚು




