Metro ಪ್ರಯಾಣ ದರ 5% ಏರಿಕೆ – ಫೆ.9 ರಿಂದ ಜಾರಿ.

ಬೆಂಗಳೂರು Metro ಪ್ರಯಾಣಿಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಒಂದು ವರ್ಷದ ಹಿಂದಷ್ಟೇ ಭಾರೀ ಪ್ರಮಾಣದಲ್ಲಿ ಪ್ರಯಾಣ ದರ ಹೆಚ್ಚಿಸಿದ್ದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಇದೀಗ ಮತ್ತೆ 5% ದರ ಹೆಚ್ಚಳ ಮಾಡಲು ನಿರ್ಧರಿಸಿದೆ.
Metro ಪ್ರಯಾಣಿಕರಿಗೆ ಬಿಗ್ ಶಾಕ್
BMRCL ಪ್ರತಿ ವರ್ಷ 5% ರಷ್ಟು ಪ್ರಯಾಣ ದರ ಹೆಚ್ಚಿಸಬಹುದೆಂದು ದರ ನಿಗದಿ ಸಮಿತಿ (Fare Fixation Committee – FFC) 2025ರಲ್ಲಿ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಬಿಎಂಆರ್ಸಿಎಲ್ ಮಂಡಳಿ ಸಭೆಯಲ್ಲಿ ದರ ಹೆಚ್ಚಳದ ಕುರಿತು ಚರ್ಚೆ ನಡೆಯಿದ್ದು, 5% ಏರಿಕೆಗೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.

ಇದನ್ನು ನೋಡಿ : ರಾಜ್ಯಸಭೆಯಲ್ಲಿ ಗದ್ಗದಿತರಾದ ದೇವೇಗೌಡರು ಕೈ ಮುಗಿದು ಮನವಿ ಮಾಡಿಕೊಂಡಿದ್ದು ಯಾಕೆ?
ಎಷ್ಟು ಹೆಚ್ಚಳ?
ಈ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಸೋಮವಾರ (ಫೆಬ್ರವರಿ 2) ಅನುಮೋದನೆ ನೀಡಿದ್ದು, ಹೊಸ ಪ್ರಯಾಣ ದರಗಳು ಮುಂದಿನ ಸೋಮವಾರದಿಂದ ಜಾರಿಗೆ ಬರಲಿವೆ. ಹೊಸ ದರದಂತೆ ಕನಿಷ್ಠ 1 ರೂಪಾಯಿ ಹಾಗೂ ಗರಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ. ಈಗ 10 ರೂಪಾಯಿಗಳಿರುವ ಕನಿಷ್ಠ ದರ 11 ರೂಪಾಯಿಗೆ ಏರಿಕೆಯಾಗಲಿದ್ದು, ಗರಿಷ್ಠ 90 ರೂಪಾಯಿಗಳಿದ್ದ ದರ 95 ರೂಪಾಯಿಗೆ ಹೆಚ್ಚಳವಾಗಲಿದೆ.
ಭಾರೀ ವಿರೋಧ
ದರ ನಿಗದಿ ಸಮಿತಿ ಕಳೆದ ವರ್ಷ 51.55% ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಆದರೆ ಬಿಂಆರ್ಸಿಎಲ್ 101.5% ರಷ್ಟು ಹೆಚ್ಚಳ ಮಾಡಿ 2025ರ ಫೆ.9 ರಂದು ಜಾರಿ ಮಾಡಿತ್ತು. ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿತವಾದ ಬೆನ್ನಲ್ಲೇ ನಾಲ್ಕು ದಿನಗಳ ಬಳಿಕ ದರವನ್ನು 30% ಇಳಿಸಿತ್ತು.

ಇದನ್ನು ಓದಿ : Car ಸರ್ವಿಸ್ ಸೆಂಟರ್ನಲ್ಲಿ ಭೀಕರ ಅಗ್ನಿ ಅವಘಡ.!




