Vijayapura : ವಿಜಯಪುರ ನಗರದ ಹೊರವಲಯದಲ್ಲಿರುವ ಸರ್ವಿಸ್ ಸೆಂಟರ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) ಕಾರುಗಳು (Car) ಸುಟ್ಟು ಕರಕಲಾಗಿವೆ.

Vijayapura : ವಿಜಯಪುರ ನಗರದ ಹೊರವಲಯದಲ್ಲಿರುವ ಕಾರ್ ಸರ್ವಿಸ್ ಸೆಂಟರ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 20ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಹೆಚ್ಎಂಕೆ ಕಾರ್ ಸರ್ವಿಸ್ ಸೆಂಟರ್ ಸಂಪೂರ್ಣ ಭಸ್ಮ
ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಹನುಮಂತ ಕನಮಡಿ ಎಂಬುವವರಿಗೆ ಸೇರಿದ ಹೆಚ್ಎಂಕೆ (HMK) ಕಾರ್ ಸರ್ವಿಸ್ ಸೆಂಟರ್ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : ಅಕ್ರಮ ಸಂಬಂಧಕ್ಕೆ ಕೊಲೆ.. ನಡುರಸ್ತೆಯಲ್ಲೇ ಜ್ಯೋತಿಷಿ ಕಮಲಾಕರ್, ಮಹಿಳೆಗೆ ಧರ್ಮದೇಟು.!

ಒಂದು ಕೋಟಿಗೂ ಅಧಿಕ ನಷ್ಟ:
ರಿಪೇರಿ ಹಾಗೂ ಸರ್ವಿಸ್ಗಾಗಿ ಸೆಂಟರ್ಗೆ ಬಂದಿದ್ದ 20ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿಯ ತೀವ್ರತೆಯಿಂದ ಇಡೀ ಸರ್ವಿಸ್ ಸೆಂಟರ್ ಸುಟ್ಟು ಭಸ್ಮವಾಗಿದ್ದು, ಒಂದು ಕೋಟಿಗೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ನಿರಾಳದ ಸಂಗತಿಯಾಗಿದೆ.

ಅಂಗಡಿಯಲ್ಲಿ ಇಟ್ಟಿದ್ದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಕಾರಿನ ಬಿಡಿಭಾಗಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್, ಘಟನೆ ಸಮಯದಲ್ಲಿ ಸರ್ವೀಸ್ ಸೆಂಟರ್ನಲ್ಲಿ ಯಾರೂ ಇಲ್ಲದಿರುವ ಕಾರಣ ಸಾವು-ನೋವು ಸಂಭವಿಸಿಲ್ಲ.
ಗೋಲಗುಂಬಜ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿ ಅವಘಡ
ಈ ಘಟನೆ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಗ್ನಿ ಅವಘಡದ ಕಾರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
MUST WATCH : TVS ELECTRIC AUTO ಶೋ ರೂಂ CLOSE.?- ಕಂಪನಿ ಮುಚ್ಚದಂತೆ ಆಟೋ ಚಾಲಕರ ಪಟ್ಟು




