ಸಿಲಿಕಾನ್ ಸಿಟಿಯ Metro ಪ್ರಯಾಣಿಕರಿಗೆ BMRCL ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ.

ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ನಗರದಲ್ಲಿ ಸೈಕ್ಲಿಂಗ್ಗೆ ಉತ್ತೇಜನ ನೀಡುವ ಹಾಗೂ ಪರಿಸರ ಸ್ನೇಹಿ ಸಂಚಾರವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯ್ದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ಯೋಜನೆಯ ಉದ್ದೇಶ ಏನು?
ಮೆಟ್ರೋ ನಿಲ್ದಾಣದಿಂದ ಕಚೇರಿ ಅಥವಾ ಮನೆಗಳಿಗೆ ತಲುಪುವ ಲಾಸ್ಟ್-ಮೈಲ್ ಕನೆಕ್ಟಿವಿಟಿ ಸಮಸ್ಯೆಗೆ ಪರಿಹಾರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಯಾಣಿಕರು ಮೆಟ್ರೋಗೆ ಬರಲು ಮತ್ತು Metro ದಿಂದ ಹೊರಡುವಾಗ ಸೈಕಲ್ ಬಳಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಸದ್ಯ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್ಗೆ ಗಂಟೆಗೆ 1 ರೂಪಾಯಿ ಹಾಗೂ ದಿನಕ್ಕೆ ಗರಿಷ್ಠ 10 ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಈ ಹೊಸ ಯೋಜನೆಯಡಿ ಆಯ್ದ 9 ನಿಲ್ದಾಣಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಸೈಕಲ್ ಪಾರ್ಕಿಂಗ್ ಸೌಲಭ್ಯ ಲಭ್ಯವಾಗಲಿದೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 28 ಜನವರಿ 2026
ಟೆಂಡರ್ ಪ್ರಕ್ರಿಯೆ ಆರಂಭ
ಈ ಉಚಿತ ಸೈಕಲ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಎಂಆರ್ಸಿಎಲ್ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಸೈಕಲ್ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ನಿಲ್ದಾಣಗಳನ್ನು ಗುರುತಿಸಿ ಮೊದಲ ಹಂತದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಉಳಿದ ಮೆಟ್ರೋ ನಿಲ್ದಾಣಗಳಲ್ಲಿ ಸದ್ಯ ಜಾರಿಯಲ್ಲಿರುವ ಪಾರ್ಕಿಂಗ್ ಶುಲ್ಕ ಮುಂದುವರಿಯಲಿದೆ.
ಈ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್
ಪರ್ಪಲ್ ಲೈನ್ (ನೇರಳೆ ಮಾರ್ಗ):
- ಮೈಸೂರು ರಸ್ತೆ
- ಬೈಯಪ್ಪನಹಳ್ಳಿ
ಗ್ರೀನ್ ಲೈನ್ (ಹಸಿರು ಮಾರ್ಗ):
- ಮಡವಾರ
- ಪೀಣ್ಯ ಇಂಡಸ್ಟ್ರಿ
- ಜೆಪಿ ನಗರ
ಯೆಲ್ಲೋ ಲೈನ್ (ಹಳದಿ ಮಾರ್ಗ):
- ಬಿಟಿಎಂ ಲೇಔಟ್
- ಎಲೆಕ್ಟ್ರಾನಿಕ್ಸ್ ಸಿಟಿ
- ರಾಗಿಗುಡ್ಡ
- ಜಯದೇವ ಆಸ್ಪತ್ರೆ
ಪ್ರಯಾಣಿಕರಿಗೆ ದೊಡ್ಡ ಅನುಕೂಲ
ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸೈಕಲ್ ಬಳಕೆ ಪರಿಣಾಮಕಾರಿ ಪರಿಹಾರವಾಗಿದ್ದು, ಬಿಎಂಆರ್ಸಿಎಲ್ನ ಈ ನಿರ್ಧಾರದಿಂದ ಸೈಕಲ್ ಸವಾರರಿಗೆ ಹಣ ಉಳಿತಾಯವಾಗುವುದರ ಜೊತೆಗೆ, ಹೆಚ್ಚಿನ ಜನರು ಮೆಟ್ರೋ ನಿಲ್ದಾಣಗಳಿಗೆ ಸೈಕಲ್ ಮೂಲಕ ತೆರಳಲು ಉತ್ತೇಜನ ದೊರೆಯಲಿದೆ.
ಇದನ್ನು ನೋಡಿ : ತುಮಕೂರಿನಲ್ಲಿ ಹೆಚ್ಚಾಗ್ತಾ ಇದೆ ಮಾಲಿನ್ಯ..?- ಗೃಹ ಸಚಿವ ಪರಮೇಶ್ವರ್ ಏನಂದ್ರು..?




