
Actor Dulquer Salmaan : ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ ಮತ್ತು ನಿರ್ಮಾಪಕರೂ ಆಗಿರುವ ದುಲ್ಕರ್ ಸಲ್ಮಾನ್ ಅವರಿಗೆ ಸಂಕಷ್ಟ ಎದುರಾಗಿದೆ. ದುಲ್ಕರ್ ಅವರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಎರಡು ಐಶಾರಾಮಿ ಕಾರುಗಳನ್ನು ಸೀಜ್ ಮಾಡಿಕೊಂಡು, ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
ಅದ್ಭುತ ಅಭಿನಯ ಕೌಶಲ್ಯದಿಂದ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ದುಲ್ಕರ್, ಹಬ್ಬಿ ಕಾರು ಸಂಗ್ರಹಕಾರರಾಗಿದ್ದಾರೆ. ಮೂಲಗಳ ಪ್ರಕಾರ, ಅವರ ಬಳಿ 40ಕ್ಕೂ ಹೆಚ್ಚು ಐಶಾರಾಮಿ ಕಾರುಗಳಸಂಗ್ರಹವಿದೆ. ಈ ಕಾರುಗಳು ಈಗ ದುಲ್ಕರ್ಗೆ ಸಮಸ್ಯೆ ತಂದಿವೆ.
“ನುಮ್ಕೂರ್” ಎಂಬ ಹೆಸರಿನಲ್ಲಿ ಕೇರಳದಾದ್ಯಂತ ನಡೆದ ಇತ್ತೀಚಿನ ಕಸ್ಟಮ್ಸ್ ದಾಳಿಗಳ ಅಂಗವಾಗಿ, ಕಾನೂನು ಬಾಹಿರವಾಗಿ ಹೊರದೇಶಗಳಿಂದ ಕಾರುಗಳನ್ನು ಖರೀದಿಸಿರುವವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಈ ಕ್ರಮದಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಮತ್ತೊಬ್ಬ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೂ ದಾಳಿ ನಡೆದಿದೆ.
ದುಲ್ಕರ್ ಸಲ್ಮಾನ್ ಅವರ ಕಾರು ಸಂಗ್ರಹದಲ್ಲಿನ ಎರಡು ಕಾರುಗಳ ದಾಖಲೆ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು, ತಕ್ಷಣವೇ ಅವುಗಳನ್ನು ಸೀಜ್ ಮಾಡಿ ನಟನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಿಗದಿತ ದಿನಾಂಕಕ್ಕೆ ಅವರು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.




