ನಾಳೆ ಕೇಂದ್ರ ಬಜೆಟ್ ಮಂಡಿಸುವ Nirmala Sitharaman.

ಕೇಂದ್ರದ ಹಣಕಾಸು ಸಚಿವೆ Nirmala Sitharaman ಅವರು ನಾಳೆ 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಈ ಭಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಆದರೂ, ಭಾನುವಾರವೇ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸರ್ಕಾರಿ ರಜಾದಿನದಲ್ಲೇ ಬಜೆಟ್ ಮಂಡನೆ
ಸರ್ಕಾರಿ ರಜಾದಿನದಲ್ಲೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷವಾಗಿದ್ದು, ಈ ಹಿನ್ನೆಲೆ ನಾಳೆ ಷೇರು ಮಾರುಕಟ್ಟೆ ಓಪನ್ ಇರಲಿದ್ದು ವಹಿವಾಟು ನಡೆಯಲಿದೆ.
ಇದನ್ನು ಓದಿ : Kalburgi ಯಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ

ಹತ್ತಾರು ನಿರೀಕ್ಷೆ
ಈ ಬಜೆಟ್ ಮೇಲೆ ದೇಶದ ವಿವಿಧ ವಲಯಗಳ ಜನರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜನ ಸಾಮಾನ್ಯರು, ಸಂಬಳ ವರ್ಗ, ಉದ್ಯಮಿಗಳು, ಹೂಡಿಕೆದಾರರು, ವ್ಯಾಪಾರಿಗಳು ಹಾಗೂ ಮಹಿಳೆಯರು ತಮ್ಮದೇ ಆದ ನಿರೀಕ್ಷೆಗಳೊಂದಿಗೆ ಬಜೆಟ್ಗೆ ಕಾಯುತ್ತಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಏನೇನು ಘೋಷಣೆಯಾಗಬಹುದು
- ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ ₹12 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ.
- ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯಲ್ಲಿ ಇಳಿಕೆ ನಿರೀಕ್ಷೆ.
- ವಿವಾಹಿತ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೆ ತರಬಹುದು. ಇದರಿಂದ ವಾರ್ಷಿಕ ₹24 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುವ ಸಾಧ್ಯತೆ.
- ವಾರ್ಷಿಕ ₹30 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸುವ ಪ್ರಸ್ತಾವನೆ.
- ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಶೇ.5ಕ್ಕೆ ಇಳಿಕೆ ಹಾಗೂ ಎಲ್ಟಿಸಿಜಿ ಶೇ.0ಕ್ಕೆ ಇಳಿಕೆ ಸಾಧ್ಯತೆ.
- ಮ್ಯೂಚ್ಯುಯಲ್ ಫಂಡ್ಗಳನ್ನು 5–7 ವರ್ಷಗಳವರೆಗೆ ಹೊಂದಿದ್ದಲ್ಲಿ ತೆರಿಗೆ ವಿನಾಯಿತಿ ಘೋಷಣೆಯಾಗುವ ನಿರೀಕ್ಷೆ.
- ಮನೆ ಬಾಡಿಗೆ ಭತ್ಯೆ (HRA) ಮಿತಿಯಲ್ಲಿ ಹೆಚ್ಚಳ ಸಾಧ್ಯತೆ.
- ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ₹2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ.

ಇದನ್ನು ನೋಡಿ : ಹಣ ಮಂಜೂರಿಗಾಗಿ ಜನರ ಪರದಾಟ ಶೌಚಾಲಯ ಕಟ್ಟಿ 6 ತಿಂಗ್ಳಾದ್ರು ದುಡ್ಡಿಲ್ಲ




