Kalburgi : ಜಮೀನಿನ ವಿಚಾರಕ್ಕೆ ಆರಂಭವಾದ ದಾಯಾದಿಗಳ ಕಲಹ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ .

Kalburgi ಜಿಲ್ಲೆಯಲ್ಲಿ ಜಮೀನಿನ ವಿಚಾರವಾಗಿ ಆರಂಭವಾದ ದಾಯಾದಿಗಳ ನಡುವಿನ ಜಗಳವು ಕೊಲೆಯಲ್ಲಿ ಅಂತ್ಯ ಗೊಂಡಿರುವ ಘಟನೆ ಸೇಡಂ ತಾಲ್ಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಕುವಿಂದ ಇರಿದು ಬರ್ಬರ ಕೊಲೆ
ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಹೋದರ ಸಂಬಂಧಿಗಳಾದ ಬಸವರಾಜ್ ತಳವಾರ್ (34) ಮತ್ತು ಘೋಳೇಶ್ ನಡುವೆ ನಿನ್ನೆ ತಡರಾತ್ರಿ ಗಲಾಟೆ ನಡೆದಿದೆ. ಇನ್ನು ಈ ಜಗಳವು ತಾರಕ್ಕೇರಿದ್ದು, ಘೋಳೇಶ್ ಚಾಕುವಿನಿಂದ ಬಸವರಾಜ್ ತಳವಾರ್ಗೆ ಇರಿದು ಕೊಲೆ ಮಾಡಿದ್ದಾನೆ.
ಇದನ್ನು ಓದಿ : ಗಣಿಯಲ್ಲಿ ಲಾರಿ ಡಿಕ್ಕಿಯಾಗಿ ಸೂಪರ್ವೈಸರ್ ಸಾವು.!

ಚಿಕಿತ್ಸೆ ಫಲಿಸದೇ ಸಾವು
ಇನ್ನು ಗಂಭೀರವಾಗಿ ಗಾಯಗೊಂಡ ಬಸವರಾಜ್ ತಳವಾರ್ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಅರೋಪಿ ವಶಕ್ಕೆ
ಈ ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಮೀನಿನ ವಿವಾದವೇ ಕೊಲೆಗೆ ಕಾರಣ ಎನ್ನಲಾಗುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನು ನೋಡಿ : ROCKING STAR YASH MOTHER ರಂಪಾಟ – ಸೈಟ್ ಗಾಗಿ ಬೀದಿಗಿಳಿದು ಫುಲ್ ಫೈಟ್




