Kalaburgi ಯಲ್ಲಿ ಹೃದಯವಿದ್ರಾವಕ ಘಟನೆ: ಅಣ್ಣನ ಅಗಲಿಕೆಯ ನೋವಲ್ಲಿ ಪ್ರಾಣವನ್ನೇ ಬಿಟ್ಟ ತಮ್ಮ.

ಅಣ್ಣನ ಸಾವಿನ ಆಘಾತವನ್ನು ಸಹಿಸಲಾರದೆ ತಮ್ಮನೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ Kalaburgi ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ.
ಅಣ್ಣನ ಅಗಲಿಕೆಯ ದುಃಖದಲ್ಲಿ ಮಾನಸಿಕವಾಗಿ ಕುಸಿದ ಶಿವರಾಯ ಸಣ್ಣಕ್ (79) ಅವರು ಆಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಪ್ರೀತಿಸಿ ಮದುವೆಯಾದವರ ಬಾಳಲ್ಲಿ ಬಿರುಗಾಳಿ! ಸಾವು-ಬದುಕಿನ ಜೊತೆ ಗಂಡನ ಹೋರಾಟ; ಇತ್ತ ಪತ್ನಿ Suicide
Kalaburgi ಯಲ್ಲಿ ಹೃದಯವಿದ್ರಾವಕ ಘಟನೆ
ಗ್ರಾಮದ ಹಿರಿಯ ನಿವಾಸಿಯಾಗಿದ್ದ ಬಸವಂತರಾಯ ಸಣ್ಣಕ್ (81) ಅವರು ಅನಾರೋಗ್ಯದಿಂದ ಜನವರಿ 26ರಂದು ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಜನವರಿ 27ರಂದು ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ತಮ್ಮ ಶಿವರಾಯ ಸಣ್ಣಕ್ ಅವರು ಅಣ್ಣನ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದರು.
ಸಾವಿನಲ್ಲೂ ಒಂದಾದ ಸಹೋದರರು!
ಅಂತ್ಯಕ್ರಿಯೆಯ ನಂತರ ಮನೆಗೆ ಮರಳಿದ ಕೆಲವೇ ಗಂಟೆಗಳಲ್ಲೇ ಶಿವರಾಯ ಸಣ್ಣಕ್ ಅವರ ಆರೋಗ್ಯದಲ್ಲಿ ಏಕಾಏಕಿ ಕುಸಿತ ಉಂಟಾಗಿ, ಅದೇ ದಿನ ರಾತ್ರಿ ಅವರು ಕೊನೆಯುಸಿರೆಳೆ ದಿದ್ದಾರೆ. ಎರಡು ದಿನಗಳಲ್ಲಿ ಇಬ್ಬರು ಸಹೋದರರು ಮೃತಪಟ್ಟಿರುವು ದರಿಂದ ಬಡದಾಳ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಇದನ್ನು ನೋಡಿ : ಕೈಗೆ ಕಟ್ಟಿದ ವಾಚ್ನಿಂದ ಖಾತರಿಯಾಯ್ತು ಅಜಿತ್ ಪವಾರ್ ಸಾವು




