Suicide : ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಹೆಣವಾಗಿ ಮಸಣ ಸೇರಿದ್ದಾಳೆ.

ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಹೆಣವಾಗಿ ಮಸಣ ಸೇರಿದ್ದಾಳೆ. ಸಂಸಾರದಲ್ಲಿ ಜಗಳ ಬರುತ್ತೆ, ಹೋಗುತ್ತೆ ಅಂತಾರೆ. ಆದ್ರೆ ಈ ಕಲಹ ಸಾವಿನಲ್ಲಿ ಅಂತ್ಯ ಕಾಣೋದೆ ದುರಂತ. ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ದಂಪತಿ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಕೌಟುಂಬಿಕ ಕಲಹಕ್ಕೆ ಗೃಹಿಣಿ ಬಲಿಯಾಗಿದ್ದಾಳೆ.
ಪ್ರೀತಿಸಿ ಮದುವೆಯಾದವರ ಬಾಳಲ್ಲಿ ಬಿರುಗಾಳಿ
ಹಾಸನ ತಾಲೂಕಿನ ಅದ್ದಿಹಳ್ಳಿ ಗ್ರಾಮದ ನಿವಾಸಿಗಳಾದ ಚೇತನ್ ಮತ್ತುರಂಜಿತಾ ಕಳೆದ ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ಒಂದು ಮಗು ಕೂಡ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
Suicide ಗೆ ಯತ್ನ
ಈ ಗಲಾಟೆಗೆ ಬೇಸತ್ತ ಪತಿ ಚೇತನ್ ಕಳೆದ ಎರಡು ದಿನಗಳ ಹಿಂದೆ ಮಾತ್ರೆ ಸೇವಿಸಿ Suicide ಗೆ ಯತ್ನಿಸಿದ್ದು, ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇದನ್ನು ನೋಡಿ : TUMAKURU | ಇಷ್ಟು ದಿನ ಆದ್ರು ರಾಗಿ ಖರೀದಿ ಇಲ್ಲ ರಾಗಿ ಖರೀದಿ ಯಾವಾಗಿಂದ ಗೊತ್ತಾ
ಪತ್ನಿ ನೇಣುಬಿಗಿದುಕೊಂಡು Suicide
ಇನ್ನೊಂದೆಡೆ, ಆಸ್ಪತ್ರೆಯಲ್ಲಿ ಪತಿಯನ್ನು ಭೇಟಿ ಮಾಡಿ ಮನೆಗೆ ಮರಳಿದ ಪತ್ನಿ ರಂಜಿತಾ, ಗಂಡನ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಕುಟುಂಬ ಹಾಗೂ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.
ವರದಕ್ಷಿಣೆ ಕಿರುಕುಳ ಆರೋಪ
ಮಗಳನ್ನು ಕಳೆದುಕೊಂಡ ರಂಜಿತಾ ಕುಟುಂಬಸ್ಥರು, ಚೇತನ್ ಹಾಗೂ ಕುಟುಂಬಸ್ಥರ ವಿರುದ್ದ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಮಗಳ ಸಾವಿಗೆ ಆತನ ಪತಿ ಚೇತನ್ ಕಾರಣ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು
ಇನ್ನು ಈ ಘಟನೆ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನು ಓದಿ : CM ಸಿದ್ದರಾಮಯ್ಯಗೆ ಮುಡಾ ಕೇಸ್ನಲ್ಲಿ ಬಿಗ್ ರಿಲೀಫ್!




