CM ಸಿದ್ದರಾಮಯ್ಯ ಅವರಿಗೆ ಈ ಕೇಸ್ನಲ್ಲಿ ಈಗ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮುಡಾ (MUDA) ನಿವೇಶನ ಹಂಚಿಕೆ ಹಗರಣದಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ತನಿಖಾ ಸಂಸ್ಥೆ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ.
CM ಗೆ ಮುಡಾ ಕೇಸ್ನಲ್ಲಿ ಬಿಗ್ ರಿಲೀಫ್!
ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯ ನಂತರ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಕೋರ್ಟ್ ಒಪ್ಪಿಕೊಂಡಿರುವುದರಿಂದ, CM ಸಿದ್ದರಾಮಯ್ಯ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದನ್ನು ಓದಿ : ಆರೋಪಿ Rajeev Gowda 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಏನಿದು ಬಿ ರಿಪೋರ್ಟ್?
ಸಾಮಾನ್ಯವಾಗಿ ತನಿಖೆ ವೇಳೆ ಆರೋಪ ಸಾಬೀತುಪಡಿಸಲು ಅಗತ್ಯವಿರುವ ಸಾಕ್ಷ್ಯಗಳು ಸಿಗದಿದ್ದಾಗ ಅಥವಾ ಆರೋಪದಲ್ಲಿ ತಾತ್ವಿಕ ಸತ್ಯಾಂಶ ಇಲ್ಲವೆಂದು ಕಂಡುಬಂದಾಗ ಪೊಲೀಸರು ‘ಬಿ ರಿಪೋರ್ಟ್’ ಸಲ್ಲಿಸುತ್ತಾರೆ. ಮುಡಾ ಪ್ರಕರಣದಲ್ಲೂ ಇದೇ ರೀತಿಯ ವರದಿಯನ್ನು ಲೋಕಾಯುಕ್ತ ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದರು.
ರಾಜಕೀಯ ಇಮೇಜ್ಗೆ ದೊಡ್ಡ ಬೂಸ್ಟ್
ಈ ತೀರ್ಪಿನಿಂದ ಸಿದ್ದರಾಮಯ್ಯ ಈಗ ಫುಲ್ ನಿರಾಳವಾಗಿದ್ದು, ಯಾವುದೇ ಟೆನ್ಷನ್ ಇಲ್ಲದೆ ಆಡಳಿತ ನಡೆಸಬಹುದು. ಕಾನೂನು ಹೋರಾಟದಲ್ಲಿ ಸಿಎಂಗೆ ಸಿಕ್ಕಿರೋ ಈ ಜಯ, ಅವರ ರಾಜಕೀಯ ಇಮೇಜ್ಗೆ ದೊಡ್ಡ ಬೂಸ್ಟ್ ಕೊಟ್ಟಿದೆ.

ಇದನ್ನು ನೋಡಿ : ನಾಳೆ KSRTC ನೌಕರರಿಂದ ಬೆಂಗಳೂರು ಚಲೋ- ಬಸ್ಗಳು ಇರುತ್ತಾ..? ಇಲ್ವಾ..?




