ವಸತಿ ಕಟ್ಟಡದ ಮೇಲೆ ಫೈರಿಂಗ್ –ಬಾಲಿವುಡ್ ನಟ Kamal R Khan ಅರೆಸ್ಟ್.

ಮುಂಬೈ: ಇಲ್ಲಿನ ವಸತಿ ಕಟ್ಟಡ ಮೇಲೆ ಫೈರಿಂಗ್ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಕಮಲ್ ಆರ್ ಖಾನ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ನಟ Kamal R Khan ಅರೆಸ್ಟ್
ಜೂನ್ 18ರಂದು ನಡೆದ ಗುಂಡಿನ ದಾಳಿಯಲ್ಲಿ ಪ್ರಮುಖ ಆರೋಪಿಯಾಗಿದ್ದ Kamal R Khan ಅವರನ್ನು ನೆನ್ನೆ ಸಂಜೆ ಓಶಿವಾರ ಪೊಲೀಸ್ ತಂಡ ಬಂಧಿಸಿದೆ. ಪ್ರಸ್ತುತ ಅವರು ಓಶಿವಾರ ಪೊಲೀಸ್ ಠಾಣೆಯ ವಶದಲ್ಲಿದ್ದಾರೆ.
ಇದನ್ನು ಓದಿ : ರಾಜ್ಯದ ಜನರಿಗೆ KMF ಸಿಹಿಸುದ್ದಿ- 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು..!

ವಸತಿ ಕಟ್ಟಡದ ಮೇಲೆ ಫೈರಿಂಗ್
ಅಂಧೇರಿಯ ಓಶಿವಾರದಲ್ಲಿರುವ ನಳಂದ ಸೊಸೈಟಿಯಿಂದ ಎರಡು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟ್ಟಡದ ಎರಡನೇ ಮತ್ತು ನಾಲ್ಕನೇ ಮಹಡಿಯಲ್ಲಿ ತಲಾ ಒಂದೊಂದು ಗುಂಡು ಪತ್ತೆಯಾಗಿದ್ದು, ಮಾಡೆಲ್, ಬರಹಗಾರ ಮತ್ತು ನಿರ್ದೇಶಕರಿಗೆ ಸೇರಿದ್ದ ಫ್ಲ್ಯಾಟ್ನಲ್ಲಿ ಸಿಕ್ಕಿದೆ. ವಿಚಾರಣೆ ವೇಳೆ ಕಮಲ್ ಖಾನ್ ಗುಂಡಿನ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಪರವಾನಗಿ ಪಡೆದ ಬಂದೂಕಿನಿಂದ ಶೂಟ್ ಮಾಡಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ತಂಡ ತನಿಖೆ
ಈ ಪ್ರಕರಣವನ್ನು ಸಂಜಯ್ ಚವಾಣ್ ನೇತೃತ್ವದ ಓಶಿವಾರಾ ಪೊಲೀಸ್ ತಂಡ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಒಟ್ಟಾಗಿ ತನಿಖೆ ನಡೆಸಿದ್ದಾರೆ. ಆರಂಭದಲ್ಲಿ ಯಾವುದೇ ಸ್ಪಷ್ಟ ಸುಳಿವು ಸಿಗದಿದ್ದರೂ, ಸಿಸಿಟಿವಿ ದೃಶ್ಯಾವಳಿಗಳಿಂದ ಕೂಡ ನಿರ್ದಿಷ್ಟ ಪತ್ತೆ ಸಿಕ್ಕಿರಲಿಲ್ಲ.

ಬಂದೂಕು ವಶ
ನಂತರ ವಿಧಿವಿಜ್ಞಾನ ತಂಡದ ಸಹಾಯದಿಂದ ಕಮಲ್ ಆರ್. ಖಾನ್ ಅವರ ಬಂಗಲೆಯಿಂದ ಗುಂಡು ಹಾರಿಸಿರಬಹುದು ಎಂದು ಶಂಕೆ ವ್ಯಕ್ತಪಟ್ಟಿತು. ಈ ಶಂಕೆ ಸತ್ಯವಾಗಿದ್ದು, ಸದ್ಯ ಬಂದೂಕನ್ನು ವಶಪಡಿಸಿಕೊಂಡು, ಮುಂದಿನ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಇದನ್ನು ನೋಡಿ ; ಹುಬ್ಬಳ್ಳಿ: ಖಾಸಗಿ ಹೋಟೆಲ್ನಲ್ಲಿ ಮಲ್ಲಿಕಾರ್ಜುನ ಖರ್ಗೆ–ಸಿದ್ದರಾಮಯ್ಯ ಭೇಟಿ




