ಸ್ನೇಹಿತನಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ Murder – ಇಬ್ಬರು ಅರೆಸ್ಟ್.

ಸ್ನೇಹಿತನಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿ, ಯುವಕನನ್ನು ಹತ್ಯೆಗೈದಿರುವ ಘಟನೆ ರಾಯಚೂರಿನ ಜಹೀರಾಬಾದ್ನ ಮಾವಿನ ಕೆರೆ ಬಳಿ ನಡೆದಿದೆ. ಕೊಲೆಯಾದ ಯುವಕನನ್ನು 22 ವರ್ಷದ ವಿಶಾಲ್ ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಗಳನ್ನು ರಾಜು ಮತ್ತು ಬಸವರಾಜ್ ಎನ್ನಲಾಗಿದೆ.
ಚಾಕುವಿನಿಂದ ಇರಿದು Murder
ನೆನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ಮೃತ ಯುವಕ ಸ್ನೇಹಿತನನ್ನ ಬೈದಿದ್ದಕ್ಕೆ ಆರೋಪಿಗಳ ಬಳಿ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರು ಆರೋಪಿಗಳು ಮನಬಂದಂತೆ ಚಾಕುವಿನಿಂದ ಇರಿದು Murder ಮಾಡಿದ್ದಾರೆ.
ಇದನ್ನು ಓದಿ : ಬ್ಯಾಂಕ್ ವ್ಯವಹಾರ ಇದ್ರೆ ಇಂದೇ ಮುಗಿಸಿಕೊಳ್ಳಿ – 4 ದಿನ Bank Bandh

ಪೊಲೀಸರಿಂದ ಪರಿಶೀಲನೆ
ಘಟನೆಯ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರನ ದಾಖಲು
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕೊಲೆಗೆ ಬಳಸಿದ ಚಾಕುವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ಬೆಂಗಳೂರಲ್ಲಿ ಮತ್ತೊಂದು ಫ್ಲೈ ಓವರ್ ಡೆಮಾಲಿಷ್?




